ರಾಜ್ಯ

ಬೆಂಗಳೂರು : 18 ತಿಂಗಳ ವಿಳಂಬದ ನಂತರ ಕೂಲಿ ಹಣ ಪಡೆದ ಖೈದಿಗಳು

Nagaraja AB

ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಖೈದಿಗಳ ಕೂಲಿ ಹಣವನ್ನು ಒಂದೂವರೆ ವರ್ಷಗಳ ನಂತರ  ರಾಜ್ಯಸರ್ಕಾರ ಬಿಡುಗಡೆ ಮಾಡಿದ್ದು, ಅವರ ಸಂತಸಕ್ಕೆ ಕಾರಣವಾಗಿದೆ.

ವಿಚಾರಣಾಧೀನಾ ಖೈದಿಗಳು ಸೇರಿದಂತೆ ಕೆಲವರ ಅಪರಾಧಿಗಳು 2016 ಸೆಪ್ಟೆಂಬರ್ ನಿಂದ 2018 ಜನವರಿವರೆವಿಗೂ ಮಾಡಿದ ಕೆಲಸದ ಹಣ ಇನ್ನೂ ಬಿಡುಗಡೆಯಾಗಿರಲಿಲ್ಲ.  83. 59, 980 ರೂ. ಬಾಕಿ ಉಳಿಸಿಕೊಳ್ಳಲಾಗಿತ್ತು. ತಾವೂ ಮಾಡಿದ್ದ ಕೆಲಸದ ಹಣವನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯೂ ಖೈದಿಗಳಿಂದ ಹೆಚ್ಚಾಗಿತ್ತು.

ಈ ಸಂಬಂಧ ಕೇಂದ್ರ ಕಾರಾಗೃಹದಲ್ಲಿನ ಮುಖ್ಯ ಸೂಪರಿಂಟೆಂಡ್  ಇಲಾಖಾ ಮುಖ್ಯಸ್ಥರು ಹಾಗೂ ಸರ್ಕಾರಕ್ಕೆ ಪತ್ರ ಬರೆದು ಅನುಮೋದನೆ ಪಡೆದುಕೊಂಡಿದ್ದರು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ಹಣ ಬಿಡುಗಡೆಯಾಗಿರಲಿಲ್ಲ. ಈಗ ರಾಜ್ಯ ನೌಕರರ ಪರೋಪಕಾರಿ ನಿಧಿಯಿಂದ  83 , 59, 980 ರೂ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ.

 ಖೈದಿಗಳ ಸ್ವಾಭಾವಿಕ ಕೆಲಸದ ಆಧಾರದ ಮೇಲೆ ಪ್ರತಿದಿನ 30, 40, 50 ರೂ ಕೂಲಿ ನೀಡಲಾಗುತ್ತದೆ. ಖೈದಿಗಳ ವೈಯಕ್ತಿಕ ಹಣದ ಖಾತೆಗೆ ಈ ಹಣವನ್ನು ಜಮೆ ಮಾಡಲಾಗುತ್ತದೆ. ಎಲ್ಲಾ ಖೈದಿಗಳೂ ಪಿಪಿಸಿ ಖಾತೆ ಹೊಂದಿದ್ದು, ಈ ಖಾತೆ ಮೂಲಕ ಹಣವನ್ನು ಜಮೆ ಮಾಡಲಾಗುತ್ತದೆ. ಆದರೆ ಇದು ವರ್ಷಾನುಗಟ್ಟಲೇ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT