ಸಿದ್ದಗಂಗಾ ಶ್ರೀಗಳೊಂದಿಗೆ ರಾಹುಲ್ ಗಾಂಧಿ 
ರಾಜ್ಯ

ತುಮಕೂರು: ತ್ರಿವಿಧ ದಾಸೋಹಿಗೆ 111 ಗುಲಾಬಿ ನೀಡಿದ ರಾಹುಲ್ ಗಾಂಧಿ

ಅಜ್ಜಿ ಇಂದಿರಾ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿದ್ದಗಂಗಾ ಮಠದ...

ತುಮಕೂರು: ಅಜ್ಜಿ ಇಂದಿರಾ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿದ್ದಗಂಗಾ ಮಠದ 111 ವರ್ಷದ ಶಿವಕುಮಾರ ಸ್ವಾಮಿಜಿಗಳ ಆಶೀರ್ವಾದ ಪಡೆದಿದ್ದಾರೆ.
ಬುಧವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಶ್ರೀಗಳ ಆಶೀರ್ವಾದ ಪಡೆದರು.  ಸುಮಾರು 4ಗಂಟೆ ಸಮಯಕ್ಕೆ ಮಠಕ್ಕೆ ಬಂದ ರಾಹುಲ್ 30 ನಿಮಿಷಗಳ ಕಾಲ ಅಲ್ಲಿಯೆ ಸಮಯ ಕಳೆದರು. ಏಪ್ರಿಲ್ 1 ರಂದು 111ನೇ ವರ್ಷಕ್ಕೆ ಶ್ರೀಗಳು ಕಾಲಿಟ್ಟ ಹಿನ್ನೆಲೆಯಲ್ಲಿ ರಾಹುಲ್ 111 ಗುಲಾಬಿ ಹೂಗಳನ್ನು ನೀಡಿದರು.
ರಾಹುಲ್ ಗಾಂದಿಗೆ ಶಾಲು ಹೊದಿಸಿ ಸ್ವಾಗತಿಸಿದ ಶ್ರೀಗಳು, ಅವರಿಗೆ ಡ್ರೈ ಫ್ರೂಟ್ಸ್ ನೀಡಿ ಹೂವಿನ ಹಾರ ಹಾಕಿದರು. ಇದೇ ವೇಳೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಶ್ರೀಗಳ ಆಶೀರ್ವಾದ ಪಡೆದ ಫೋಟೋ ತೋರಿಸಿದ ರಾಹುಲ್ ನನ್ನ ಅಜ್ಜಿ ಮತ್ತು ನನ್ನ ತಾಯಿ ಅವರಿಗೆ ಕೂಡ ನೀವು ಆಶೀರ್ವದಿಸಿದ್ದೀರಾ, ನನಗೆ ಯಾವಾಗಲೂ ನಿಮ್ಮ ಆಶೀರ್ವಾದ ಬೇಕು ಎಂದು ರಾಹುಲ್ ಗಾಂಧಿ ಸ್ವಾಮಿಜಿಗಳಿಗೆ ತಿಳಿಸಿದರು. 
ಮಠದ ಕಿರಿಯ ಸ್ವಾಮೀಜಿ ಸಿದ್ದಲಿಂಗಾ ಶ್ರೀಗಳು ರಾಹುಲ್ ಗಾಂಧಿ ತಲೆಯ ಮೇಲೆ ಅಕ್ಷತೆ ಹಾಕಿ ಆಶೀರ್ವದಿಸಿದರು. ಇನ್ನೂ ತುಮಕೂರಿನಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಹಲವು ಮಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT