ರಾಜ್ಯ

ಘನತ್ಯಾಜ್ಯ ಘಟಕಗಳ ಸೂಕ್ತ ನಿರ್ವಹಣೆ ಮಾಡಿ: ಬಿಬಿಎಂಪಿಗೆ ಹೈಕೋರ್ಟ್ ಆದೇಶ

Sumana Upadhyaya

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಲಯ ಜಂಟಿ ಆಯುಕ್ತರಿಗೆ ಸೇರಿದ ಏಳು ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಅನುಸರಿಸಲಾಗುವ ವಿಧಾನಗಳನ್ನು ತಕ್ಷಣವೇ ತಿಳಿಸಲು ತಾಂತ್ರಿಕ ಮಾರ್ಗಸೂಚಿ ಸಮಿತಿಯನ್ನು ರಚಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

ಅಲ್ಲದೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿರುವ ಹೈಕೋರ್ಟ್, ಬಿಬಿಎಂಪಿಯ ಪರಿಸರ ಮತ್ತು ರಾಸಾಯನಿಕ ಎಂಜಿನಿಯರ್ ಗಳಿಗೆ ನಿಯೋಜಿಸಿರುವ ವಿವಿಧ ಕೆಲಸಗಳನ್ನು ಹಿಂತೆಗೆದುಕೊಳ್ಳಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮತ್ತು ಅವರಿಗೆ ತ್ಯಾಜ್ಯ ನಿರ್ವಹಣ ಘಟಕದ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ್ ಮತ್ತು ಬಿ.ವಿ,ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ, ಬೆಂಗಳೂರು ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಕೆಲಸವನ್ನು ಸರಿಯಾಗಿ ನಿರ್ವಹಿಸುವಂತೆ ಬಿಬಿಎಂಪಿಗೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ಪ್ರತಿ ಘನತ್ಯಾಜ್ಯ ಘಟಕದ ಉಸ್ತುವಾರಿಯನ್ನು ವಲಯ ಜಂಟಿ ಆಯುಕ್ತರಿಗೆ ವಹಿಸಬೇಕು. ಘನತ್ಯಾಜ್ಯ ನಿರ್ವಹಣೆ ಘಟಕದ ಭದ್ರತೆ ಮತ್ತು ಕಾರ್ಯವಿಧಾನ, ನಿರ್ವಹಣೆ ಇತ್ಯಾದಿಗಳ ಜವಬ್ದಾರಿಯನ್ನು ಅವರಿಗೆ ವಹಿಸಬೇಕು ಎಂದು ಕೋರ್ಟ್ ಆದೇಶಿಸಿದೆ.

ಹೈಕೋರ್ಟ್ ಆದೇಶದ ಪ್ರಕಾರ,ಜಂಟಿ ಆಯುಕ್ತರು ಘನತ್ಯಾಜ್ಯ ಘಟಕವನ್ನು ವಾರಕ್ಕೊಮ್ಮೆ ಭೇಟಿ ಮಾಡಿ ವಲಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ವಾರಕ್ಕೆ ಎರಡು ಬಾರಿ ವಲಯಗಳಿಗೆ ಭೇಟಿ ನೀಡಿ ಅಲ್ಲಿನ ಬಗ್ಗೆ ವರದಿ ಸಲ್ಲಿಸಬೇಕು. ಪ್ರಗತಿ ಪರಿಶೀಲನೆಗೆ ವಲಯ ಜಂಟಿ ಆಯುಕ್ತರು ಘಟಕ ವ್ಯವಸ್ಥಾಪಕರ ಜೊತೆ ಸಭೆ ನಡೆಸಬೇಕು ಎಂದು ಹೇಳಲಾಗಿದೆ.

SCROLL FOR NEXT