ರಾಜ್ಯ

ಬೆಂಗಳೂರು: ದಾಖಲೆಯಿಲ್ಲದ 8 ಕೋಟಿ ರು. ಹಣ ಜಪ್ತಿ

Shilpa D
ಬೆಂಗಳೂರು: ಕಳೆದ ಹಲವು ದಿನಗಳಿಂದ ಶುಕ್ರವಾರದವರೆಗೆ ದಾಖಲೆಯಿಲ್ಲದ 8 ಕೋಟಿ ರು ಹಣ  ಹಾಗೂ ವಸ್ತುಗಳನ್ನು ಪೊಲೀಸರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಶುಕ್ರವಾರ ಗುತ್ತಿಗೆದಾರ ಹಾಗೂ ಆತನ ಚಾಲಕನನ್ನು ಬಂಧಿಸಿರುವ ಕೇಂದ್ರ ವಿಭಾಗದ ಪೊಲೀಸರು, 1.5 ಕೋಟಿ ರು ವಶಕ್ಕೆ  ಪಡೆದಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣಾ ವೇಳೆ ಮತದಾರರಿಗೆ ಹಂಚಲು ಹಣವನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಭಾಷ್. ಎಂ ಹಾಗೂ ಆತನ ಡ್ರೈವರ್ ವೆಂಕಟ್ ಸುರೇಶ್ ಬಾಬು ಅವರನ್ನು ಬಂಧಿಸಲಾಗಿದೆ. ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಏಪ್ರಿಲ್ 5 ರಂದು ಚುನಾವಣಾ ಆಯೋಗ ಹಣ ಹಾಗೂ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿತ್ತು, ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2,04,74,130 ರು ಹಣ ಹಾಗೂ 6,301 ಲೀಟರ್ ಲಿಕ್ಕರ್ ಹಾಗೂ 23.76 ಲಕ್ಷ ಮೌಲ್ಯದ ಡ್ರಗ್ಸ್ , 2,464 ಕೆಜಿ ಚಿನ್ನ, ಮತ್ತು ಗೃಹಪಯೋಗಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಜೊತೆಗೆ ರಾಜಕಾರಣಿಗಳು ಟಿವಿ ಚಾನೆಲ್ ಗಳಲ್ಲಿ  ನೀಡುತ್ತಿರುವ ಪ್ರಚಾರ ಹಾಗೂ ಜಾಹೀರಾತಿಗಳನ್ನು  ಸೂಕ್ಷ್ಮವಾಗಿ ಗಮನಸಿಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.
SCROLL FOR NEXT