ಕೊಪ್ಪ: ಕಲ್ಲಿಂದ ಜಜ್ಜಿ ಶಾಲಾ ಬಾಲಕಿಯ ಬರ್ಬರ ಹತ್ಯೆ
ಕೊಪ್ಪ: ಶಾಲಾ ವಿದ್ಯಾರ್ಥಿನಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಕೆಸಗೋಡು ಗ್ರಾಮದ ಸಮೀಪ ಈ ದುರಂತ ಸಂಭವಿಸಿದ್ದು 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಹನ್ನೆರಡರ ಬಾಲಕಿ ಹತ್ಯೆಯಾಗಿದ್ದಾಳೆ.
ಕೆಳಕೊಪ್ಪದಲ್ಲಿದ್ದ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಹಿಂತಿರುಗುತ್ತಿದ್ದಾಗ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಬಾಲಕಿ ತೀವ್ರ ಪ್ರತಿಭಟನೆ ತೋರಿದ್ದ ಕಾರಣ ಆಕೆಯನ್ನು ಕೊಲೆ ಮಾಡಿರುವುದಾಗಿ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಸುಮುಖ (18) ಎಂಬ ಯುವಕನನ್ನು ಹರಿಹರಪುರ ಠಾಣೆ ಪೋಲೀಸರು ಬಂಧಿಸಿದ್ದು ತನಿಖೆಗೊಳಪಡಿಸಿದ್ದಾರೆ.