ಸೌಜನ್ಯ ಹತ್ಯೆ: ಸಿಬಿಐ ತನಿಖೆ ಕುರಿತು ಹೈಕೋರ್ಟ್ ಅಸಮಾಧಾನ
ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಡೆಸಲಾದ ಸಿಬಿಐ ತನಿಖೆ ಕುರಿತಂತೆ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಿಸದೇ ಇರಲು ಕಾರಣ ತಿಳಿಸುವಂತೆ ಕೇಳಿದ ನ್ಯಾಯಾಲಯ ಈ ಸಂಬಂಧ ತನಿಕಾಧಿಕಾರಿಗಳಿಂದ ಮಾಹಿತಿ ಒದಗಿಸಿ ಎಂದು ಸಿಬಿಐ ಪರ ವಕೀಲರಿಗೆ ಹೇಳಿದೆ.
ಕೊಲೆ ಪ್ರಕರಣದ ಮರು ತನಿಖೆಗೆ ಕೋರಿ ಸೌಜನ್ಯ ತಂದೆ ಚಂದಪ್ಪ ಗೌಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದೆ.
ಈ ವೇಳೆ ಸಿಬಿಐ ತನಿಖೆ ಬಗೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ನ್ಯಾಯಪೀಠ "ಪೋಲೀಸ್ ತನಿಖೆಯಲ್ಲಿ ನ್ಯಾಯ ದೊರಕಲಾರದೆಂದು ಸಿಬಿಐ ಗೆ ವಹಿಸಲಾಗಿತ್ತು. ಇದೀಗ ಸಿಬಿಐ ತನಿಖೆ ಸಹ ಅನುಮಾನವನ್ನು ಹುಟ್ಟಿಸುವಂತಿದೆ. ನಿಮ್ಮಿಂದ ಸೂಕ್ತ ತನಿಖೆ ಸಾಧ್ಯವಿಲ್ಲವಾದಲ್ಲೆ ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳಲಿದೆ." ಎಂದು ಎಚ್ಚರಿಸಿದೆ.
ಅರ್ಜಿಯ ಮುಂದಿನ ವಿಚಾರಣೆಯನ್ನು ಏ.17ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ನಿಡಿದೆ.