ರಾಜ್ಯ

ಏ.12ಕ್ಕೆ ಕರ್ನಾಟಕ ಬಂದ್ ಇಲ್ಲ: ವಾಟಾಳ್ ನಾಗರಾಜ್

Raghavendra Adiga
ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಏಪ್ರಿಲ್ 12 ರಂದು ಕರೆ ನೀಡಲಾಗಿದ್ದ `ಕರ್ನಾಟಕ ಬಂದ್’ ಆಚರಣೆ ನಿರ್ಧಾರ ಕೈಬಿಟ್ಟಿದ್ದೇವೆ. ಬಂದ್ ಮಾಡುವ ಬದಲು ಅಂದು ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ. ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಏ. 12 ರಂದು ಕರೆ ನಿಡಿದ್ದ ಕರ್ನಾಟಕ ಬಂದ್ ನಿರ್ಧಾರ ವಾಪಾಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
"ನಾವು ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ವಿರೋಧಿಸುತ್ತೇವೆ, ತಮಿಳುನಾಡು  ರಾಜಕೀಯಕ್ಕಾಗಿ ಕಾವೇರಿ ವಿಷಯವನ್ನ ಮುನ್ನೆಲೆಗೆ ತರುತ್ತಿದೆ." ಎಂದಿದ್ದಾರೆ.
ಏ.12 ರಂದು ಕನ್ನಡ ಪರ ಸಂಘಟನೆಗಳು ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಪ್ರತಿಭಟನೆ ನಡೆಸಲಿವೆ. ಅಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು. ಈ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಕಾವೇರಿ ವಿವಾದದ ಕುರಿತು ಫೆ.6ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಅಂತಿಮ ತೀರ್ಪಿನಲ್ಲಿ ಆರು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರಕ್ಕೆ ಸೂಚನೆ ನೀಡಿತ್ತು. ಆದರೆ ಕರ್ನಾಟಕವು ನಿರ್ವಹಣಾ ಮಾಂಡಳಿ ರಚನೆಯನ್ನು ವಿರೋಧಿಸಿತ್ತು.
SCROLL FOR NEXT