ಶಾಲಾ ಮುಖ್ಯಸ್ಥೆಯೊಂದಿಗೆ ವಾಗ್ವಾದ ನಡೆಸುತ್ತಿರುವ ಪೋಷಕರು 
ರಾಜ್ಯ

ಬೆಂಗಳೂರು: ಡಸ್ಟರ್ ನಿಂದ ಬಾಲಕನಿಗೆ ಹೊಡೆದು ಕಿವಿತಮಟೆಗೆ ಹಾನಿ, ಶಿಕ್ಷಕನ ಬಂಧನ

ನಗರದ ಶಾಲೆಯೊಂದರಲ್ಲಿ ಶಿಕ್ಷಕ ವಿದ್ಯಾರ್ಥಿಗೆ ಕ್ರೂರವಾಗಿ ಶಿಕ್ಷೆ ನೀಡಿರುವ ಮತ್ತೊಂದು ಪ್ರಕರಣ ...

ಬೆಂಗಳೂರು: ನಗರದ ಶಾಲೆಯೊಂದರಲ್ಲಿ ಶಿಕ್ಷಕ ವಿದ್ಯಾರ್ಥಿಗೆ ಕ್ರೂರವಾಗಿ ಶಿಕ್ಷೆ ನೀಡಿರುವ ಮತ್ತೊಂದು ಪ್ರಕರಣ ವರದಿಯಾಗಿದೆ. ಡಸ್ಟರ್ ನಿಂದ ಶಿಕ್ಷಕ ಹೊಡೆದದ್ದರಿಂದ ಕಿವಿಯ ತಮಟೆಗೆ ಹಾನಿಯಾಗಿದೆ ಎಂದು ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದಾರೆ.

ವಿದ್ಯಾರಣ್ಯಪುರದಲ್ಲಿರುವ ನಾರಾಯಣ ಇ-ಟೆಕ್ನೊ ಶಾಲೆಯಲ್ಲಿ ಈ ಪ್ರಕರಣ ನಡೆದಿದೆ. ಶಿಕ್ಷಕ ವಿದ್ಯಾರ್ಥಿಗೆ ಡಸ್ಟರ್ ನಿಂದ ಹೊಡೆದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕನನ್ನು ಬಂಧಿಸಲಾಗಿದೆ.

ಹತ್ತನೇ ತರಗತಿಯಲ್ಲಿ ಓದುತ್ತಿರುವ ಶಶಾಂಕ್ ವಿ ಎಂಬ ವಿದ್ಯಾರ್ಥಿಗೆ ಬೇಸಿಗೆ ವಿಶೇಷ ತರಗತಿಯಲ್ಲಿ ಗಣಿತದ ಶಿಕ್ಷಕ ಡಸ್ಟರ್ ನಿಂದ ಹೊಡೆದಿದ್ದಾರೆ. ಬಾಲಕ ತನ್ನ ಸಹಪಾಠಿಯ ಜೊತೆ ಮಾತನಾಡುತ್ತಿದ್ದಾಗ ಶಿಕ್ಷಕರಿಗೆ ಸಿಟ್ಟು ಬಂದು ಡಸ್ಟರ್ ನಿಂದ ಹೊಡೆದಿದ್ದಾರೆ.

ಪೋಷಕರ ದೂರಿನ ಮೇರೆಗೆ ಪೊಲೀಸರು 32 ವರ್ಷದ ವೆಂಕಟಸುಬ್ಬಯ್ಯ ಎಂಬ ಶಿಕ್ಷಕನನ್ನು ಬಾಲನ್ಯಾಯ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.ಶಿಕ್ಷಕನ ವಿರುದ್ಧ ಸ್ವಯಂಪ್ರೇರಿತ ಹಲ್ಲೆ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ಪೋಷಕರು ಶಾಲೆಯ ಬಳಿ ಜಮಾಯಿಸಿ ಬಾಲಕನಿಗೆ ಶಿಕ್ಷಕರು ಹೊಡೆದಿದ್ದಕ್ಕಾಗಿ ಮತ್ತು ಬೇಸಿಗೆಯಲ್ಲಿ ವಿಶೇಷ ತರಗತಿಗಳನ್ನು ನಡೆಸುವುದಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿವರ್ಷ ಈ ಶಾಲೆಯಲ್ಲಿ ಬೇಸಿಗೆ ತರಗತಿಗೆ ಮಕ್ಕಳನ್ನು ಕಳುಹಿಸುವಂತೆ ಹೇಳುತ್ತಾರೆ. ಆದರೆ ಅವರನ್ನು ಜಾಗರೂಕತೆಯಿಂದ ನೋಡಿಕೊಳ್ಳುವುದಿಲ್ಲ. ಬಾಲಕನಿಗೆ ಹೊಡೆದ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದರು.

ನಾರಾಯಣ ಇ-ಟೆಕ್ನೊ ಶಾಲೆಯ ಡೀನ್ ಶ್ರಿವಾನಿ ವೈ ಮಾತನಾಡಿ, ಘಟನೆ ಹಿನ್ನೆಲೆಯಲ್ಲಿ ಶಿಕ್ಷಕನನ್ನು ವಜಾ ಮಾಡಲಾಗಿದೆ. ಆದರೆ ಶಿಕ್ಷಕ ಹೊಡೆದ ಕಾರಣಕ್ಕೆ ಮಾತ್ರ ಬಾಲಕನ ಕಿವಿತಮಟೆ ಹಾನಿಯಾಗಿಲ್ಲ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಇತ್ತೀಚೆಗೆ ಆತನ ಪೋಷಕರು ಕೂಡ ಅವನಿಗೆ ಹೊಡೆದಿದ್ದರಿಂದ ತೀವ್ರ ಪೆಟ್ಟಾಗಿ ಸರ್ಜರಿ ಮಾಡಿಸಿಕೊಳ್ಳುವ ಅವಶ್ಯಕತೆ ಬಂದಿದೆ ಎಂದು ಗೊತ್ತಾಯಿತು ಎನ್ನುತ್ತಾರೆ.

ಶೈಕ್ಷಣಿಕ ತರಗತಿಗಳ ಸಮಯದಲ್ಲಿಲ್ಲದಿರುವುದರಿಂದ ಬೇಸಿಗೆ ರಜೆಯಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವುದು ಕಾನೂನಿಗೆ ವಿರುದ್ದ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ ಹೀಗೆ ವಿಶೇಷ ತರಗತಿಗಳನ್ನು ಮಾಡುವ ಅನೇಕ ಶಾಲೆಗಳಿವೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳ ವ್ಯವಸ್ಥಾಪಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!