ಮಂಗಳೂರು: ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸುವ ಪ್ರತಿಷ್ಠಿತ ಕಿಶೋರ್ ವೈಜ್ಞಾನಿಕ ಪ್ರೋತ್ಸಾಹನ ಯೋಜನೆ ಪರೀಕ್ಷೆಯಲ್ಲಿ ಮಂಗಳೂರಿನ ಪ್ರತ್ಯೂಷ್ ಪಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಇವರು ಏಳನೇ ಸ್ಥಾನ ಗಳಿಸಿದ್ದಾರೆ.
ಪರೀಕ್ಷೆ ಬರೆದ ಮಂಗಳೂರಿನ ಎಲ್ಲಾ 16 ಅಭ್ಯರ್ಥಿಗಳು ಸೆಂಟರ್ ಫಾರ್ ಅಡ್ವಾನ್ಸ್ ಡ್ ಲರ್ನಿಂಗ್ ನಲ್ಲಿ ಓದುತ್ತಿದ್ದು ಎಲ್ಲರೂ ಈ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ್ದಾರೆ.
ಅನೀಶ್ ಹೆಬ್ಬಾರ್(92), ಶ್ರೇಯಸ್ ವಿ ಪೈ(116), ಶ್ರೀಶಾ ಜಿ ಭಟ್(142), ಅನುಷ್ಕಾ ಮೋಗರ್(162), ಶಾರಜ್ ಕೆ(180), ಶ್ರವಣ್ ಸಿಂಗ್ ಮೆಹ್ರಾ(226), ನವನೀಶ್(406), ಸೂರಜ್ ಸಾಮಗ(477)ವಿಷ್ಣು ಭಾರದ್ವಾಜ್(661), ರಜತ್ ರಾವ್(670), ಉನ್ನತಿ ನಾಯಕ್(784), ಸಮರ್ಥ್ ಭಟ್(823), ಸೌರವ್ ವಿ(1091), ಸೂರಜ್ ಎಸ್(1240) ಮತ್ತು ರಶ್ಮಿ ಕಾಸಂಗೇರಿ(1811) ಅಂಕ ಗಳಿಸಿದ್ದಾರೆ.
ರ್ಯಾಂಕ್ ಪಡೆದವರು ಮೂಲ ವಿಜ್ಞಾನದಲ್ಲಿ ಡಿಗ್ರಿ ಪಡೆದರೆ ವಾರ್ಷಿಕ ಫೆಲೋಶಿಪ್ 1.12 ಲಕ್ಷ ರೂಪಾಯಿ ಸಿಗುತ್ತದೆ. ಅಲ್ಲದೆ ಬೆಂಗಳೂರಿನ ಐಐಎಸ್ಸಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೇರ ಪ್ರವೇಶ ಸಿಗುತ್ತದೆ. ಅನೇಕ ವೈಜ್ಞಾನಿಕ ಸಂಸ್ಥೆಗಳು ಆಯೋಜಿಸುವ ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸಬಹುದು. ಅಲ್ಲದೆ ದೇಶದ ವಿವಿಧ ಪ್ರತಿಷ್ಠಿತ ಪ್ರಯೋಗಾಲಯಗಳು, ವೈಜ್ಞಾನಿಕ ಮತ್ತು ಸಂಶೋಧನಾ ಸಂಸ್ಥೆಗಳನ್ನು ಬಳಸಿಕೊಳ್ಳಲು ಗುರುತು ಚೀಟಿಗಳು ದೊರಕುತ್ತವೆ.