ರಾಜ್ಯ

ಕಲಬುರ್ಗಿ: ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನ, ದರೋಡೆಕೋರರ ಮೇಲೆ ಪೋಲೀಸ್ ಗುಂಡಿನ ದಾಳಿ

Raghavendra Adiga
ಕಲಬುರ್ಗಿ: ಬಂಧಿಸಲು ತೆರಳಿದ್ದ ಪೋಲೀಸರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಇಬ್ಬರು ದರೋಡೆಕೋರರ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ. 
ಗುರುವಾರ ಮುಂಜಾನೆ ಕಲಬುರ್ಗಿ ಹೊರವಲಯದಲ್ಲಿ ದರೋಡೆಕೋರರ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ ಎಂದು ಕಲಬುರ್ಗಿ ಎಸ್ಪಿ ಶಶಿಕುಮಾರ್ ಹೇಳಿದರು.
ಪೊಲೀಸ್ ಉಪ-ತನಿಖಾಧಿಕಾರಿಗಳಾದ ಪರುಶುರಾಮ ಮತ್ತು ವಹೀದ್ ಕೋತ್ವಾಲ್, ಇತರ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ಪೊಲೀಸ್ ತಂಡವು ದರೋಡೆಕೋರರನ್ನು ಬಂಧಿಸಲು ಕಲಬುರ್ಗಿ ಹೊರವಲಯದ ಆಶ್ರಯ ಕಾಲೊನಿಗೆ ತೆರಳಿತ್ತು.
ಆ ವೇಳೆ ಶೇಖರ್ ಹಾಗೂ ಅಜೀಮ್ ಎನ್ನುವ ದರೋಡೆಕೋರರು ಪೋಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ  ನಡೆಸಿದ್ದಾರೆ. ಪಿಎಸ್ಐ ಪರಶುರಾಮ್ ಮತ್ತು ವಹೀದ್ ಕೋತ್ವಾಲ್ ದರೋಡೆಕೋರರ ಮೇಲೆ ಗುಂಡು ಹಾರಿಸುತ್ತಾರೆ. ಆಗ  ಶೇಖರ್ ಮತ್ತು ಅಜೀಮ್ ಅವರ ಕಾಲುಗಳಿಗೆ ಗುಂಡು ತಗುಲಿ ಗಾಯವಾಗುತ್ತದೆ. ಹಾಗೆ ಗಾಯಗೊಂಡ ದರೋಡೆಕೋರರನ್ನು ಪೋಲೀಸರು ಬಂಧಿಸಿ ಜಿಲ್ಲಾ ಶ್ಪತ್ರೆಗೆ ಚಿಕಿಯ್ಸೆಗಾಗಿ ದಾಖಲಿಸಿಇದ್ದಾರೆ.
ಆದರೆ ಇನ್ನೂ ಇಬ್ಬರು ದರೋಡೆಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಎಸ್ಪಿ  ತಿಳಿಸಿದರು. 
ಬಂಧಿತ ದರೋಡೆಕೋರರಿಬ್ಬರೂ ಅಳಂದ ಚೆಕ್ ಪೋಸ್ಟ್ ನಿವಾಸಿಗಳಾಗಿದ್ದಾರೆ. ಅವರು ರೌಡಿ ಶೀಟರ್ ಮಾರ್ಕೆಟ್ ಸತೀಶ್ ಸಹಚರರು ಎಂದು ಪೋಲೀಸರು ಹೇಳಿದ್ದಾರೆ. ಮಾರ್ಕೆಟ್ ಸತೀಶ್ ಇದಾಗಲೇ ಕಂಬಿ ಹಿಂದೆ ಬಂಧಿಯಾಗಿದ್ದಾನೆ.
ಇದೇ ವೇಳೆ ದಾಳಿಯಲ್ಲಿ ಪೋಲೀಸ್ ಪೇದೆಗಳಾದ ಭೀಮಾ ನಾಯ್ಕ್ ಮತ್ತು ಬಂಡೇನಾವಾಸ್ ಎನ್ನುವವರಿಗೆ ಎದೆ ಭಾಗದಲ್ಲಿ ಗಾಯಗಳಾಗಿದೆ.ಅವರನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 
ಕಲಬುರ್ಗಿ ಎಸ್ಪಿ ಶಶಿಕುಮಾರ್, ಹೆಚ್ಚುವರಿ ಎಸ್ಪಿ ಜಯಪ್ರಕಾಶ್ ಮತ್ತು ಸಹಾಯಕ ಎಸ್ಪಿ ಲೋಕೇಶ್ ಅವರುಗಳು ಆಸ್ಪತ್ರೆಗೆ ತೆರಳಿ ಪೋಲೀಸ್ ಪೇದೆಗಳ ಆರೋಗ್ಯ ವಿಚಾರಿಸಿದ್ದಾರೆ.
ಘಟನೆ ಸಂಬಂಧ ಕಲಬುರ್ಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
SCROLL FOR NEXT