ಬಾಮರಾಜನಗರ: ಭೀಕರ ಅಪಘಾತ, ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ
ಚಾಮರಾಜನಗರ: ಕಾರೊಂದರ ಮೇಲೆ ಲಾರಿ ಉರುಳಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ ದಾರುಣ ಘಟನೆ ಚಾಮರಾಜನಗರ ಜಿಲ್ಲೆ ಸೋಮವಾರಪೇಟೆಯಲ್ಲಿ ನಡೆದಿದೆ.
ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಈ ಪಘಾತ ಸಂಭವಿಸಿದ್ದು ಮೃತರನ್ನು ಸಿದ್ದರಾಮ, ಮಕ್ಕಳಾದ ಸಂಕೇತ್ ಕುಮಾರ್ ಮತ್ತು ಲಕ್ಷ್ಮೀಕಾಂತ್ ಎಂದು ಗುರುತಿಸಲಾಗಿದೆ.
ವಿಜಯಪುರದ ಇಂಡಿ ತಾಲೂಕು ಕುಳ್ಳುರುಗಿಯವರಾದ ಇವರು ಕೇರಳ, ತಮಿಳುನಾಡು ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದರು.ಮಾರ್ಗ ಮಧ್ಯೆ ಚಾಮರಾಜನಗರದ ಸೋಮವಾರಪೇಟೆಯಲ್ಲಿ ಕಾರು ನಿಲ್ಲಿಸಿ ಎಳನೀರು ಕುಡಿಯುತ್ತಿದ್ದಾಗ ಜೋಳ ತುಂಬಿದ್ದ ಲಾರಿ ತಮಿಳುನಾಡಿನತ್ತ ಹೊರಟಿತ್ತು.
ವೇಗವಾಗಿ ಬಂದಿದ್ದ ಲಾರಿ ಕಾರ್ ನಮೇಲೆ ಉರುಳಿದೆ. ಆ ವೇಳೆ ಕಾರ್ ನಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ಇನ್ನೂ ಮೂವರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಕಲಿಸಲಾಗಿದೆ.
ಘಟನೆ ಸಂಬಂಧ ಚಾಮರಾಜನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.