ಸಾಂದರ್ಭಿಕ ಚಿತ್ರ 
ರಾಜ್ಯ

ಉದ್ಯಮಿಗೆ ಬೆದರಿಸಿ ಹಣ ವಸೂಲಿಗೆ ಯತ್ನ: ಉಡುಪಿಯಲ್ಲಿ ಮೂವರು ಪತ್ರಕರ್ತರ ಬಂಧನ, ಮತ್ತೊರ್ವ ಪರಾರಿ

ಕೋಟೇಶ್ವರದ ಉದ್ಯಮಿಯೋರ್ವರನ್ನು ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿದ ಹಿನ್ನಲೆಯಲ್ಲಿ ಮೂವರು ನಕಲಿ ಪತ್ರಕರ್ತರನ್ನು ಕುಂದಾಪುರ...

ಉಡುಪಿ: ಕೋಟೇಶ್ವರದ ಉದ್ಯಮಿಯೋರ್ವರನ್ನು ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿದ ಹಿನ್ನಲೆಯಲ್ಲಿ ಮೂವರು ನಕಲಿ ಪತ್ರಕರ್ತರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಕುಂದಾಪುರದ ಲೋಕೇಶ್, ಧರ್ಮೇಂದ್ರ ಹಾಗೂ ಮಂಜುನಾಥ್ ಅವರನ್ನು ಸದ್ಯ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೋರ್ವ ವಿಕ್ರಮ್ ಎಂಬಾತ ನಾಪತ್ತೆಯಾಗಿದ್ದಾನೆ
ಏಪ್ರಿಲ್ 9 ರಂದು ಆರೋಪಿಗಳು ಕೋಟೇಶ್ವರದ ಬೀಚ್ ರಸ್ತೆಯಲ್ಲಿನ ಎಫ್ಎಂ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯುನಿಟ್ ಮಾಲಿಕ ಫಾರೂಕ್ ಅವರ ಫ್ಯಾಕ್ಟರಿಗೆ ಬಂದು, ನಾವು ಮಾಧ್ಯಮದವರು ನೀವು ಗ್ಲುಕೋಸ್ ಬಾಟಲಿಗಳನ್ನು ತೆಗೆದುಕೊಳ್ಳಬಾರದು ಬೆದರಿಸಿ, ಒಂದು ಲಕ್ಷ ನೀಡದಿದ್ದರೆ ಈ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತೇವೆ ಎಂದು ಹೆದರಿಸಿ, 5,000 ಹಣವನ್ನು ತೆಗೆದುಕೊಂಡು ಹೋಗಿದ್ರು ಎಂದು ಮಾಲಕ ಫಾರೂಕ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಫಾರೂಕ್ ನಾಲ್ವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು, ಅದರ ಆಧಾರದ ಮೇಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ, ಭಾರತೀಯ ದಂಡ ಸಂಹಿತೆ 384, 392,506 ಮತ್ತು 34ರ ನಿಯಮದಂತೆ ಕೇಸ್ ದಾಖಲಿಸಲಾಗಿದ್ದು, ಏಪ್ರಿಲ್ 20ರ ವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Video: 'ನಿಂಗಿದು ಬೇಕಿತ್ತಾ ಮಗನೇ..': ಬಾಲ್ ಕೊಡಲು ಹೋಗಿ ರನೌಟ್ ಆದ ಪಾಕ್ ಮಾಜಿ ನಾಯಕ, ಕೆರಳಿ ಕೆಂಡವಾದ Salman Agha

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

SCROLL FOR NEXT