ರಾಜ್ಯ

ಚುನಾವಣೆ ಮತ್ತು ಮೌಲ್ಯಮಾಪನದ ಜೊತೆ ಚುನಾವಣೆ ಕೆಲಸ; ಕೇಳೋರಿಲ್ಲ ಶಿಕ್ಷಕರ ಪಾಡು

Sumana Upadhyaya

ಬೆಂಗಳೂರು: ಈ ಬಾರಿಯ ಬೇಸಿಗೆ ರಜೆ ಸರ್ಕಾರಿ ಶಾಲೆ ಶಿಕ್ಷಕ-ಶಿಕ್ಷಕಿಯರಿಗೆ ಮರೀಚಿಕೆಯಾಗಿದೆ. ಕಾರಣ ಅವರಿಗೆ ಶಾಲೆಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿದ್ದುವ ಜೊತೆಗೆ ಚುನಾವಣೆಗೆ ಸಂಬಂಧಪಟ್ಟ ಕೆಲಸಗಳನ್ನು ಕೂಡ ಮಾಡಬೇಕು.

ಹೈಸ್ಕೂಲ್ ಶಿಕ್ಷಕ-ಶಿಕ್ಷಕಿಯರಿಗೆ ಎಸ್ಎಸ್ಎಲ್ ಸಿ ಉತ್ತರ ಪತ್ರಿಕೆಗಳನ್ನು ತಿದ್ದುವ ಜೊತೆಗೆ ಮೇ 12ರಂದು ನಡೆಯುವ ಮತದಾನಕ್ಕೆ ಮತಗಟ್ಟೆಗಳನ್ನು ತಪಾಸಣೆ ಮಾಡುವಂತೆ ಕೂಡ ಹೇಳಿದ್ದಾರೆ. ಎರಡೂ ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡಲು ಕಷ್ಟವಾಗುತ್ತಿದೆ.

ಇದು ಶಿಕ್ಷಕರಿಗೆ ನಿಜಕ್ಕೂ ಸವಾಲಿನ ವಿಷಯ. ಹಲವು ಶಿಕ್ಷಕರು ಬೆಳಗಿನ ಹೊತ್ತು ಮತಗಟ್ಟೆಗಳಿಗೆ ಭೇಟಿ ನೀಡಿ ಮಧ್ಯಾಹ್ನ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಾರೆ. ಎರಡೂ ಕೆಲಸಗಳು ಕಡ್ಡಾಯವಾಗಿರುವುದರಿಂದ ಹೊರೆಯೆನಿಸುತ್ತಿದೆ ಎನ್ನುತ್ತಾರೆ ಕರ್ನಾಟಕ ಪ್ರೌಢಶಿಕ್ಷಣ ಸಹಾಯಕ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಹೆಚ್.ಕೆ.ಮಂಜುನಾಥ್.

ಚುನಾವಣಾ ಆಯೋಗ 20 ಶಿಕ್ಷಕರ ವಿರುದ್ಧ ಈಗಾಗಲೇ ಕ್ರಮ ತೆಗೆದುಕೊಂಡಿರುವುದರಿಂದ ಎರಡೂ ಕೆಲಸಗಳನ್ನು ಹೇಗಾದರೂ ಕಷ್ಟಪಟ್ಟು ಶಿಕ್ಷಕರು ಮಾಡುತ್ತಿದ್ದಾರೆ. ಯಾವ ಕೆಲಸ ತಪ್ಪಿಸಲು ಕೂಡ ಅವರಿಗೆ ಮನಸ್ಸಾಗುತ್ತಿಲ್ಲ.

ಇನ್ನು ಕೆಲವು ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡದಿರುವುದರಿಂದ ಕೆಲವು ಶಿಕ್ಷಕರನ್ನು ವಜಾ ಮಾಡಲಾಗಿದೆ. ಇದು ಶಿಕ್ಷಕರಲ್ಲಿ ಭೀತಿ ಹುಟ್ಟಿಸಿದೆ ಎನ್ನುತ್ತಾರೆ ಮಂಜುನಾಥ್.

ನಮ್ಮ ಕ್ಷೇತ್ರಗಳಲ್ಲಿ ನಾವು ಕನಿಷ್ಠ 5 ಮತಗಟ್ಟೆಗಳಿಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕಾಗುತ್ತದೆ. ಪ್ರತಿದಿನ ಸಂಬಂಧಪಟ್ಟ ಅಧಿಕಾರಿಗಳಿಗೆ ತಪಾಸಣೆಯ ವರದಿಯನ್ನು ಸಲ್ಲಿಸಬೇಕು. ಸಣ್ಣಪುಟ್ಟ ತಪ್ಪುಗಳು ನಮ್ಮ ಕಡೆಯಿಂದ ಆದರೆ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು.

SCROLL FOR NEXT