ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮದ್ಯದಂಗಡಿಗಳಲ್ಲಿ ಮದ್ಯದ ಕೊರತೆಯುಂಟಾಗಬಹುದು ಎಂಬ ವದಂತಿಗಳು ಹಬ್ಬಿರುವುದರಿಂದ ಬೆಂಗಳೂರು ನಗರದಲ್ಲಿ ಕೆಲವರು ಅಧಿಕ ಪ್ರಮಾಣದಲ್ಲಿ ಮದ್ಯಗಳನ್ನು ಖರೀದಿಸಿ ಸಂಗ್ರಹಿಸಿಡುತ್ತಿದ್ದಾರೆ.
ಇತ್ತೀಚೆಗೆ ಮದ್ಯ ಪೂರೈಕೆ ಕಡಿಮೆಯಾಗಿದ್ದು ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಮದ್ಯದಂಗಡಿ ಮಾಲಿಕರು ಸಹ ಹೇಳುತ್ತಿದ್ದಾರೆ. ಆದರೆ ನಿಯಮಾನುಸಾರ ಮದ್ಯಗಳು ಪೂರೈಕೆಯಾಗುತ್ತಿವೆ ಎನ್ನುತ್ತದೆ ಅಬಕಾರಿ ಇಲಾಖೆ. ಮದ್ಯಗಳ ದುರುಪಯೋಗವಾಗದಂತೆ ಸಂಗ್ರಹವಾಗಿರುವ ಮದ್ಯಗಳನ್ನು ಮದ್ಯದಂಗಡಿಗಳು ಚುನಾವಣೆಗೆ ಮುನ್ನ ಮಾರಾಟ ಮಾಡಲು ಮುಂದಾಗುತ್ತಿವೆ.
ನಗರದ ಮಲ್ಲೇಶ್ವರ ಮತ್ತು ರಾಜಾಜಿನಗರಗಳಲ್ಲಿ ಹಲವು ಮದ್ಯದಂಗಡಿಗಳನ್ನು ಮುಚ್ಚಲಾಗಿದೆ ಎಂದು ಸಾಹಿಲ್ ಶರ್ಮ ಎಂಬುವವರು ಹೇಳುತ್ತಾರೆ. ಚುನಾವಣೆ ಮುಗಿಯುವವರೆಗೆ ಮದ್ಯದಂಗಡಿಗಳನ್ನು ಮುಚ್ಚಲು ಹಲವು ಮದ್ಯದಂಗಡಿಗಳು ನಿರ್ಧರಿಸಿವೆ. ಚುನಾವಣೆ ಮುಗಿಯುವವರೆಗೆ ಈ ಪ್ರದೇಶದಲ್ಲಿ ಮದ್ಯಗಳು ಸಿಗಲಿಕ್ಕಿಲ್ಲ ಎಂದು ಭಾವಿಸಿದ್ದೇನೆ ಎನ್ನುತ್ತಾರೆ ಮದ್ಯದ ಖರೀದಿದಾರರೊಬ್ಬರು.
ಮದ್ಯದಂಗಡಿಗಳ ಮಾಲಿಕರು ಹೇಳುವ ಪ್ರಕಾರ ಬೆಂಗಳೂರಿನಲ್ಲಿ ಮದ್ಯ ಪೂರೈಕೆ ಕಡಿಮೆಯಾಗಿದೆ. ಅಬಕಾರಿ ಇಲಾಖೆಯ ದಾಳಿಗೆ ತಪಾಸಣೆಗೆ ಒಳಗಾಗಬಹುದು ಎಂಬ ಭಯದಿಂದ ಕಾನೂನನ್ನು ಒತ್ತಾಯಪೂರ್ವಕವಾಗಿ ಪಾಲಿಸುತ್ತಿದ್ದಾರೆ. ಅಶೋಕ ನಗರ ಮತ್ತು ಕೋರಮಂಗಲದಲ್ಲಿರುವ ಬಾರ್ ಗಳಲ್ಲಿ ಇಷ್ಟು ದಿನ ಮದ್ಯಗಳನ್ನು ಪೂರೈಕೆ ಮಾಡಲಾಗುತ್ತಿದ್ದು ಇಂದು ನಿಲ್ಲಿಸಲಾಗಿದೆ.
ಅಬಕಾರಿ ಇಲಾಖೆಯ ಸೂಚನೆ ಪ್ರಕಾರ, ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಖರೀದಿ ಮಾಡಿದ ಲಿಕ್ಕರ್ ಗಿಂತ ಶೇಕಡಾ 20ಕ್ಕಿಂತ ಹೆಚ್ಚು ಮದ್ಯಗಳನ್ನು ಖರೀದಿ ಮಾಡಬಾರದು ಎಂದಿದೆ. ಹೀಗಾಗಿ ಪೂರೈಕೆ ಕಡಿಮೆಯಾಗಿದೆ.