ಸಾಂದರ್ಭಿಕ ಚಿತ್ರ 
ರಾಜ್ಯ

ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಕರ್ನಾಟಕ ಆರ್ ಪಿಎಫ್ ನಿಂದ ಆಪ್ ಬಳಕೆ

ರಾಜ್ಯದಲ್ಲಿ ಕಾಣೆಯಾಗಿರುವ ಮಕ್ಕಳನ್ನು ಪತ್ತೆಹಚ್ಚಲು ರೈಲ್ವೆ ರಕ್ಷಣಾ ಪಡೆ ಸದ್ಯದಲ್ಲಿಯೇ ಆಪ್ ...

ಬೆಂಗಳೂರು: ರಾಜ್ಯದಲ್ಲಿ ಕಾಣೆಯಾಗಿರುವ ಮಕ್ಕಳನ್ನು ಪತ್ತೆಹಚ್ಚಲು ರೈಲ್ವೆ ರಕ್ಷಣಾ ಪಡೆ ಸದ್ಯದಲ್ಲಿಯೇ ಆಪ್ ವೊಂದನ್ನು ನಿಯೋಜಿಸಲಿದ್ದು ಅದರಲ್ಲಿ ಕಾಣೆಯಾಗಿರುವ ಮಕ್ಕಳ ಹಿನ್ನೆಲೆಯನ್ನು ತಕ್ಷಣವೇ ಕಂಡುಹಿಡಿದು ಅವರನ್ನು ಪತ್ತೆಹಚ್ಚಿ ಕುಟುಂಬದವರ ಜೊತೆ ಸೇರಿಸಲು ಅನುಕೂಲವಾಗುತ್ತದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಉಪ ಪೊಲೀಸ್ ಮಹಾನಿರ್ದೇಶಕ ಮತ್ತು ರೈಲ್ವೆ ರಕ್ಷಣಾ ಪಡೆಯ ಮುಖ್ಯ ಭದ್ರತಾ ಆಯುಕ್ತ ಡಿ.ಬಿ.ಕಸರ್, ಫೇಸ್ ಟಾಗರ್ ಎಂಬ ಆಪ್ ಎಲ್ಲಾ ಆಂಡ್ರಾಯ್ಡ್ ಮತ್ತು ಸ್ಮಾರ್ಟ್ ಫೋನ್ ಗಳಲ್ಲಿ ಕೆಲಸ ಮಾಡಲಿದೆ. ಅದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಯ ಪಯ ವೆಬ್ ಸೈಟ್ ನಲ್ಲಿ ಜೋಡಿಸಲಾಗುತ್ತದೆ. ಅದರಲ್ಲಿ ಸುಮಾರು ಮೂರೂವರೆ ಲಕ್ಷ ಮಕ್ಕಳ ದಾಖಲೆಗಳು ಹಿಡಿಯುತ್ತವೆ ಎಂದು ಹೇಳಿದರು.

ರೈಲ್ವೆ ರಕ್ಷಣಾ ಪಡೆಯಿಂದ ಮಕ್ಕಳನ್ನು ರಕ್ಷಿಸಿದ ತಕ್ಷಣವೇ ಅವರ ಫೋಟೋಗಳನ್ನುಈ ಪೋರ್ಟಲ್ ಗೆ ಕಳುಹಿಸಬಹುದು. ಫೋಟೋ ಕಳೆದುಹೋಗಿರುವ ಮಗುವಿನ ಯಾವುದಾದರೂ ಫೋಟೋ ಜೊತೆ ಹೊಂದಿಕೆಯಾದರೆ ಸಾಫ್ಟ್ ವೇರ್ ನಲ್ಲಿ ತಕ್ಷಣವೇ ಗೊತ್ತಾಗುತ್ತದೆ. ನಂತರ ಮಗುವಿನ ಪೋಷಕರು ಮತ್ತು ಕುಟುಂಬದವರಿಗೆ ಮಾಹಿತಿ ನೀಡಿ ಅವರನ್ನು ಕಾಪಾಡಲಾಗುತ್ತದೆ ಎಂದು ಕಸರ್ ಹೇಳುತ್ತಾರೆ.

ಪ್ರಾಯೋಗಿಕ ಹಂತವಾಗಿ ಈ ಯೋಜನೆಯನ್ನು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ 15 ದಿನಗಳ ಕಾಲ ನಡೆಸಲಾಗುತ್ತದೆ. ಆರಂಭದ ದಿನಗಳಲ್ಲಿ ಮೂರರಿಂದ 6 ತಿಂಗಳವರೆಗೆ ಪ್ರಾಯೋಗಿಕವಾಗಿ ಇದನ್ನು ನಡೆಸಲಾಗುವುದು ಎಂದು ಡಿಐಜಿ ತಿಳಿಸಿದರು.

ಮಕ್ಕಳನ್ನು ರಕ್ಷಿಸಲು ಎಲ್ಲಾ ಆರ್ ಪಿಎಫ್ ಸಿಬ್ಬಂದಿಗೆ ಸ್ಮಾರ್ಟ್ ಫೋನ್ ಗಳನ್ನು ನೀಡಲಾಗುವುದು. ಪ್ರಾಯೋಗಿಕ ಯೋಜನೆಯ ಫಲಿತಾಂಶವನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದ ಮೇಲೆ ಅದು ಯಶಸ್ವಿಯಾದರೆ ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಹೇಳಿದರು.
ಪ್ರಸ್ತುತ ಮಕ್ಕಳನ್ನು ಕಳ್ಳಸಾಗಣೆದಾರರಿಂದ ರಕ್ಷಿಸಿ ರಾಜ್ಯ ಪೊಲೀಸರಿಗೆ ಹಸ್ತಾಂತರಿಸುತ್ತೇವೆ. ನಂತರ ಅವರಿಗೆ ಏನಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ ಎಂದು ರೈಲ್ವೆ ರಕ್ಷಣಾ ಪಡೆಯ ಹಿರಿಯ ಅಧಿಕಾರಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ಆಪ್ ನ್ನು ಟೆಕ್ನೊಕ್ರೆಟ್ ವಿಜಯ್ ಗಾನಡಿಶೇಖರ್ ಅಭಿವೃದ್ಧಿಪಡಿಸಿ ರೈಲ್ವೆ ರಕ್ಷಣಾ ಪಡೆಗೆ ಹಸ್ತಾಂತರಿಸಿದರು. ಎರಡು ದಶಕಗಳ ಹಿಂದೆ ಅವರ ಸೋದರ ಕಾಣೆಯಾದಾಗ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಂತರ ಅವರು ಅಮೆರಿಕಕ್ಕೆ ಹೋಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT