ಬೆಂಗಳೂರು: ವಿಜಯನಗರ ಸಾಮ್ರಾಜ್ಯದ ರಾಜಧಾನಿ, ಯುನೆಸ್ಕೋ ವಿಶ್ವ ಪರಂಪರೆ ತಾಣ ಹಂಪಿ ಭಾರತೀಯ ಪುರಾತತ್ವ ಇಲಾಖೆಯ ಪಾಲಿಗೆ ಕಡ್ಡಾಯವಾಗಿ ನೋಡಬೇಕಾದ ಸ್ಥಳವಲ್ಲ!
ಪುರಾತತ್ವ ಇಲಾಖೆ ಬಿಡುಗಡೆಗೊಳಿಸಿರುವ ಭಾರತದಲ್ಲಿ ಕಡ್ಡಾಯವಾಗಿ ನೋಡಬೇಕಾದ ಪ್ರವಾಸಿ ತಾಣಗಳ ಪಟ್ಟಿಯಿಂದ ಹಂಪಿಯ ಹೆಸರು ಕೈಬಿಟ್ಟು ಹೋಗಿದೆ, ಈ ಲುರಿತಂತೆ ಲೋಈಕಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ.
ಇಲಾಖೆ ಪ್ರಕಾರ ಸಂಸ್ಕೃತಿ ಸಚಿವಾಲಯ ಈ ಪಟ್ಟಿಯನ್ನು ತಯಾರಿಸಿದೆ.ಕಲೆ, ಶಿಲ್ಪಕಲೆ, ವಾಸ್ತುಶಿಲ್ಪ ವಿನ್ಯಾಸ ಸೇರಿ ಅನೇಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಪಟ್ಟಿಯನ್ನು ರಚಿಸಲಾಗಿದೆ. ಹಂಪಿಯನ್ನು ಪಟ್ಟಿಯಿಂದ ಕೈಬಿಟ್ಟ ಕುರಿತಂತೆ ಮರುಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದೆ.
ಈ ಪಟ್ಟಿಯನ್ನು 2015ರಲ್ಲಿ ತಯಾರಿಸಲಾಗಿದ್ದು ಭಾರತ ಪ್ರವಾಸೋದ್ಯಮ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪಟ್ಟಿ ರಚಿಸಲಾಗಿದೆ.
ಕರ್ನಾಟಕ ತಿಹಾಸ ಅಕಾಡೆಮಿಯ ಉಪಾಧ್ಯಕ್ಷ ಎಚ್‌ಎಸ್ ಗೋಪಾಲರಾವ್ ಮಾತನಾಡಿ "ಹಂಪಿ ಹಾಗೂ ನಳಂದಾಗಳನ್ನು ಪುರಾತತ್ವ ಇಲಾಖೆ ಪಟ್ಟಿಯಿಂದ ತೆಗೆದು ಹಾಕಿರುವುದು ಆಘಾತಕಾರಿ.ಪ್ರವಾಸೋದ್ಯಮ ಉದ್ದೇಶದಿಂದ ಈ ಪಟ್ಟಿ ತಯಾರಾಗಿದ್ದಾದರೆ ಸಾವಿರಾರು ವರ್ಷದ ಪರಂಪರೆ ಹೊಂದಿದ ಹಂಪಿಯನ್ನು ಹೊರಗಿಟ್ಟಿದ್ದೇಕೆ? ಈ ಕುರಿತಂತೆ ಪ್ರಶ್ನಿಸುತ್ತಾನೆ" ಎಂದಿದ್ದಾರೆ.
1986ರಲ್ಲಿ ಯುನೆಸ್ಕೋ ಹಂಪಿಗೆ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ನಿಡಿತ್ತು.
ಇನ್ನು ಇದೇ ರೀತಿ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಗಳಿಸಿರುವ ಬಿಹಾರದ ನಳಂದಾ ಮಹಾವಿಹಾರ, ಜಾಸ್ಥಾನದ ಹಿಲ್ ಫೋರ್ಟ್, ಮೆಜೆಸ್ಟಿಕ್ ಕೋಟೆ ಮುಂತಾದವು ಸಹ ಪುರಾತತ್ವ ಇಲಾಖೆ ಪಟ್ಟಿಯಲ್ಲಿ ಸೇರಿಸಿಲ್ಲ.