ರಾಜ್ಯ

ಇಲಾಖೆಯಿಂದಲೇ ಲಾಂಡ್ರಿ ವ್ಯವಸ್ಥೆ; ಕೆಎಸ್ಆರ್ ಟಿಸಿಗೆ 5 ಲಕ್ಷ ಉಳಿತಾಯ!

Sumana Upadhyaya

ಬೆಂಗಳೂರು: ರಾಜ್ಯ ಸಾರಿಗೆ ನಿಗಮದ ಬೆಂಗಳೂರಿನ ಶಾಂತಿನಗರ ಘಟಕ ಲಾಂಡ್ರಿ ಘಟಕ ಲಕ್ಷಾಂತರ ರೂಪಾಯಿ ಉಳಿಕೆ ಮಾಡುವಲ್ಲಿ ಸಹಾಯ ಮಾಡಿದೆ.

ಕಳೆದ 9 ತಿಂಗಳಲ್ಲಿ ಸುಮಾರು 5 ಲಕ್ಷ ರೂಪಾಯಿ ಉಳಿತಾಯವಾಗಿದೆ ಎನ್ನುತ್ತಾರೆ ಕೆಎಸ್ಆರ್ ಟಿಸಿಯ ಪ್ರಮುಖ ಐಷಾರಾಮಿ ಬಸ್ಸುಗಳಲ್ಲಿರುವ ಹೊದಿಕೆಗಳನ್ನು ತೊಳೆಯಲು ಮತ್ತು ಸ್ವಚ್ಛ ಮಾಡಲು ಹೊರಗೆ ಖಾಸಗಿ ಲಾಂಡ್ರಿ ಶಾಪ್ ಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿತ್ತು. ಆದರೆ ಸರಿಯಾಗಿ ತೊಳೆಯುತ್ತಿಲ್ಲ ಮತ್ತು ವಾಸನೆ ಬರುತ್ತಿರುತ್ತದೆ ಎಂದು ಪ್ರಯಾಣಿಕರಿಂದ ಬರುತ್ತಿದ್ದ ದೂರುಗಳಿಂದ ಕೆಎಸ್ಆರ್ ಟಿಸಿ ತಾನೇ ಲಾಂಡ್ರಿ ಘಟಕವನ್ನು ಆರಂಭಿಸಿತು.

ಕೆಎಸ್ಆರ್ ಟಿಸಿ ಲಾಂಡ್ರಿ ಘಟಕದಲ್ಲಿ ಪ್ರಸ್ತುತ 30 ಸಿಬ್ಬಂದಿಯಿದ್ದು ವರ್ಷವಿಡೀ ಕೆಲಸ ಮಾಡುತ್ತಾರೆ. ಪ್ರತಿದಿನ 7,300 ಬ್ಲಾಂಕೆಟ್ ಮತ್ತು 300ಕ್ಕೂ ಅಧಿಕ ಪ್ರೀಮಿಯಂ ಬಸ್ ಗಳ ಹೊದಿಕೆಯನ್ನು ತೊಳೆಯಲಾಗುತ್ತದೆ. ಇದಕ್ಕೆ ಡಿಟರ್ಜೆಂಟ್, ವಿದ್ಯುತ್ ಮತ್ತು ಪ್ರತಿ ಬೆಡ್ ಶೀಟ್ ತೊಳೆಯಲು ನಾಲ್ಕೂವರೆಯಿಂದ 5 ರೂಪಾಯಿ ನೀಡಲಾಗುತ್ತದೆ. ಈ ಹಿಂದೆ ಖಾಸಗಿಯವರಿಗೆ ಕೆಎಸ್ ಆರ್ ಟಿಸಿ 7ರಿಂದ 8 ರೂಪಾಯಿಗಳನ್ನು ನೀಡುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT