ಮಲೈ ಮಹಾದೇಶ್ವರ ಬೆಟ್ಟ ದೇವಾಲಯ 
ರಾಜ್ಯ

ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ಸಂಚಾರ ನಿಷೇಧ: ಪ್ರವಾಸೋದ್ಯಮಕ್ಕೆ ಪೆಟ್ಟು?

ಕಾವೇರಿ ವನ್ಯಜೀವಿ ಧಾಮದಲ್ಲಿನ ಕಾಡು ಪ್ರಾಣಿಗಳ ರಕ್ಷಣೆ ಹಿತದೃಷ್ಟಿಯಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತು ಅರಣ್ಯ ಇಲಾಖೆ ಪ್ರಸ್ತಾವನೆ ...

ಮೈಸೂರು: ಕಾವೇರಿ ವನ್ಯಜೀವಿ ಧಾಮದಲ್ಲಿನ ಕಾಡು ಪ್ರಾಣಿಗಳ ರಕ್ಷಣೆ ಹಿತದೃಷ್ಟಿಯಿಂದ ಮಲೆಮಹದೇಶ್ವರ  ಬೆಟ್ಟದಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತು  ಅರಣ್ಯ ಇಲಾಖೆ ಪ್ರಸ್ತಾವನೆ ಮಾಡಿದೆ.
2008 ರಲ್ಲಿ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧಿಸಲಾಗಿತ್ತು, ಅದಾದ ನಂತರ ನಾಗರಹೊಳೆ ಮತ್ತು ಬಿ,ಆರ್ ಹಿಲ್ಸ್ ಗಳಲ್ಲು ರಸ್ತೆ ಸಂಬಂಧಿತ ಅಪಘಾತಗಳಲ್ಲಿ ಪ್ರಾಣಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾತ್ರಿ ಸಂಚಾರ ನಿಷೇಧಿಸಲಾಗಿತ್ತು,
ಹೀಗಾಗಿ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದು, ಆ ಹಿನ್ನೆಲೆಯಲ್ಲಿ ಕೌಡಹಳ್ಳಿ- ತಳಬೆಟ್ಟ- ಎಂಎಂಹಿಲ್ಸ್ -ಪಾಲಾರ್ ಬ್ರಿಡ್ಜ್ ನ 35 ಕಿಮೀ ದೂರದವರೆಗೂ ಸಂಚಾರ ನಿಷೇಧ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಸಂಬಂಧ ಚಾಮರಾಜನಗರ ಜಿಲ್ಲಾಧಿಕಾರಿ ಸಭೆ ನಡೆಸಿದ್ದು, ಅರಣ್ಯ ಇಲಾಖೆ, ಎಂಎಂ ಹಿಲ್ಸ್ ದೇವಾಲಯ ಪ್ರಾಧಿಕಾರ  ಹಾಗೂ ಚುನಾಯಿತ ಪ್ರತಿನಿಧಿಗಳ ಸಾರ್ವಜನಿಕ ಸಭೆ ನಡೆಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ  ಎಂಎಂ ಹಿಲ್ಸ್ ನಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ಭಕ್ತಾದಿಗಳು, ವಿಶೇಷವಾಗಿ ಅಮಾವಾಸ್ಯೆ ದಿನ, ಸೋಮವಾರ ಮತ್ತು ಕಾರ್ತಿಕ ಮಾಸ ಹಾಗೂ ದೀಪಾವಳಿ ಮತ್ತು ಶಿವರಾತ್ರಿ ಸಮಯಗಳಲ್ಲಿ ಆಗಮಿಸುತ್ತಾರೆ,
ಮಲೆಮಹಾದೇಶ್ವರ ಬೆಟ್ಟದಲ್ಲಿ  ರಾತ್ರಿ ಗಂಟೆಗೆ ಮಹಾ ಮಂಗಳಾರತಿ ಇರುತ್ತದೆ, ಇದಕ್ಕಾಗಿ ಲಕ್ಷಾಂತರ ಜನ ಭಕ್ತರು  ಭಾಗವಹಿಸುತ್ತಾರೆ, ಹೀಗಾಗಿ ಸಂಜೆ ವೇಳೆ ಜನ ಅಲ್ಲಿಗೆ ಆಗಮಿಸುತ್ತಾರೆ, ಜೊತೆಗೆ ಬೆಳಗ್ಗಿನ ಪೂಜೆಗೆ ಮತ್ತು ಅಭಿಷೇಕಕ್ಕಾಗಿ ಮುಂಜಾನೆಯೇ ಆಗಮಿಸುತ್ತಾರೆ, ರಾತ್ರಿ ಸಂಚಾರ ನಿಷೇಧದಿಂದಾಗಿ ಎರಡು ದಿನ ಪ್ರವಾಸ ದುಬಾರಿಯಾಗುತ್ತದೆ ಎಂದು ಪ್ರಕಾಶ್ ಎಂಬ ಅಂಗಡಿಯಾತ ತಿಳಿಸಿದ್ದಾರೆ.
ಬಂಡಿಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಯಾವುದೇ ಹಳ್ಳಿಗಳಿಲ್ಲ,  ಆದರೆ ಎಂಎಂ ಹಿಲ್ಸ್  ಸ್ಥಿತಿಯೇ ಬೇರೆ, ಇಲ್ಲಿ ಸುಮಾರು 5 ಸಾವಿರ ಜನಸಂಖ್ಯೆಯಿದೆ. ಇದೊಂದು ಅಂತರರಾಜ್ಯ ಹೆದ್ದಾರಿಯಾಗಿದೆ, ಮೈಸೂರು-ಕೊಳ್ಳೇಗಾಲ, ಸೇಲಂ ಮತ್ತು ಧರ್ಮಪುರಿ ಹಾಗೂ ಈರೋಡ್ಗಳ ಸಂಪರ್ಕ ಬೆಸೆಯುವ ಏಕೈಕ ಹೆದ್ದಾರಿಯಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಈ ಪ್ರಸ್ತಾವನೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ, ಇದು ಇಲ್ಲಿನ ಸ್ಥಳೀಯ ಧಾರ್ಮಿಕ ಆಚರಣೆಗೆ ತೊಂದರೆ  ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT