ರಾಜ್ಯ

ವಿದ್ಯಾರ್ಥಿಗಳೇ ಎಚ್ಚರ: ರಾಜ್ಯದಲ್ಲಿವೆ 23 ನಕಲಿ ಎಂಜನೀಯರ್ ಕಾಲೇಜು!

Shilpa D
ಬೆಂಗಳೂರು: ದೇಶದಲ್ಲಿರುವ ನಕಲಿ ಕಾಲೇಜುಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 23 ನಕಲಿ ಎಂಜಿನೀಯರಿಂಗ್ ಕಾಲೇಜುಗಳಿವೆ, ಈ ಕಾಲೇಜುಗಳು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಅನಮೋದನೆ ಪಡೆದಿಲ್ಲ ಎಂದು ತಿಳಿದು ಬಂದಿದೆ.
ಈ ಮಾಹಿತಿಯನ್ನು ಲೋಕಸಭೆಯಲ್ಲಿ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ, ದೇಶದಲ್ಲಿ ಒಟ್ಟು 227 ನಕಲಿ ಎಂಜಿನೀಯರಿಂಗ್ ಕಾಲೇಜುಗಳಿದ್ದು,  ಅದರಲ್ಲಿ ಕರ್ನಾಟಕ ರಾಜ್ಯದಲ್ಲೇ 23 ನಕಲಿ ಸಂಸ್ಥೆಗಳಿವೆ.
ಈ ನಕಲಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪದವಿಗೆ ಯಾವುದೇ ಮೌಲ್ಯವಿರುವುದಿಲ್ಲ, ಅವರು ಯಾವುದೇ ಸರ್ಕಾರಿ ನೌಕರಿಗೂ ಪರಿಗಣಿಸುವುದಿಲ್ಲ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧಿಕಾರಿ ತಿಳಿಸಿದ್ದಾರೆ,
ಭಾರತದಲ್ಲಿರುವ 24 ನಕಲಿ ವಿಶ್ವ ವಿದ್ಯಾನಿಲಯಗಳಿದ್ದು, ಅದರಲ್ಲಿ ಕರ್ನಾಟಕದಲ್ಲಿ ಒಂದು ನಕಲಿ ವಿವಿಯಿದೆ. ಬೆಳಗಾವಿಯ ಗೋಕಾಕ್ ನಲ್ಲಿರುವ ಬಾದಾಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ, ನಕಲಿ ವಿವಿ ಎಂದು ವರದಿಯಲ್ಲಿ ಹೇಳಿದೆ.
SCROLL FOR NEXT