ರಾಜ್ಯ

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಸುಳ್ಳು ವರದಿಗಳ ವಿರುದ್ಧ ತಜ್ಞರ ಕಿಡಿ

Manjula VN
ಬೆಂಗಳೂರು: ಕರ್ನಾಟಕದ ಅರಣ್ಯ ಪ್ರದೇಶವಾದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂಬ ವರದಿಗಳ ವಿರುದ್ಧ ವನ್ಯಜೀವಿ ತಜ್ಞರು ತೀವ್ರವಾಗಿ ಕಿಡಿಕಾರಿದ್ದಾರೆ. 
ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿಯವರು, ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರಿರುವ ಕುರಿತು ವರದಿಗಳಾಗಿವೆ. ನನ್ನಂತಹ ಏಅನೇಕ ಹೋರಾಟಗಾರರು ಇಂತಹ ಚಟುವಟಿಕೆಗಳನ್ನು ತಡೆಯಲು ಕಳೆದ 9 ವರ್ಷಗಳಿಂದ ಯತ್ನ ನಡೆಸುತ್ತಿದ್ದೇವೆ. ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ಹಾಗೂ ಇನ್ನಿತರೆ ನಿರ್ಧಾರಗಳನ್ನು ಸುಪ್ರೀಂಕೋರ್ಟ್ ಕೈಗೊಳ್ಳುತ್ತದೆ. ಬಹಿರಂಗವಾಗಿ ಒಂದು ರೀತಿಯಲ್ಲಿ ಹೇಳಿಕೆ ನೀಡಿ, ಬರವಣಿಗೆಯಲ್ಲಿ ಸರ್ಕಾರ ಮತ್ತೊಂದನ್ನು ಹೇಳುತ್ತದೆ ಎಂದು ನಾವು ಭಾವಿಸಬಾರದು. ಮಾಧ್ಯಮಗಳ ವರದಿಯಿಂದ ವಯಾನಾಡಿನ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ. 
ಅಭಯಾರಣ್ಯದ ಹೆದ್ದಾರಿಯನ್ನು ಅಗಲೀಕರಣ ಮಾಡುವ ಕಾರ್ಯವನ್ನು ಮೊಟಕುಗೊಳಿಸಲು ಕಳೆದ 9 ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಪ್ರತೀ ಬಾರಿಯೂ ಕೆಲವರಷ್ಟೇ ಈ ಕುರಿತು ದನಿ ಎತ್ತುತ್ತಾರೆ. ಕೆಲ ಸಮುದಾಯದವರು ಅಭಯಾರಣ್ಯಕ್ಕೆ ಬಂದು ರಜೆ ದಿನಗಳನ್ನು ಕಳೆದು ಹೋಗುತ್ತಾರೆ. ಆದರೆ, ಇಂತಹ ಹೋರಾಟಗಳಲ್ಲಿ ಭಾಗಿಯಾಗುವವರ ಸಂಖ್ಯೆ ಮಾತ್ರ ಅತ್ಯಂತ ವಿರಳ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯರನ್ನು ಶ್ಲಾಘಿಸಿದ ಅವರು, ದೇಶದ ಅತ್ಯುತ್ತಮ ಸಂರಕ್ಷಣಾಕಾರರಲ್ಲಿ ಇಂದಿರಾ ಗಾಂಧಿ ಒಬ್ಬರು ಎಂದಿದ್ದಾರೆ. 
SCROLL FOR NEXT