ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್
ಬೆಂಗಳೂರು: ನನ್ನ ಜನ್ಮದಿನದಂದು ದಯವಿಟ್ಟು ಯಾವುದೇ ಫ್ಲೆಕ್ಸ್'ಗಳನ್ನು ಹಾಕಬೇಡಿ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಬಳಿ ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾನು ಮತ್ತು ನನ್ನ ಕುಟುಂಬ ಸಹೋದರ ಜಿ.ಶಿವಪ್ರಸಾದ್ ಅವರ ನಿಧನ ದುಃಖದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ನಾಳೆಯ ನನ್ನ ಜನ್ಮದಿನದ ಸಂಭ್ರಮವನ್ನು ಆಚರಣೆ ಮಾಡುತ್ತಿಲ್ಲ. ನನ್ನ ಪ್ರೀತಿಯೆ ಬೆಂಬಲಿಗರ ಶುಭಾಶಯಗಳು ಸದಾಕಾಲ ನನ್ನೊಂದಿಗಿರುತ್ತದೆ. ನನ್ನ ಭಾವನೆಗಳು ನಿಮಗೆ ಅರ್ಥವಾಗುತ್ತದೆ ಹಾಗೂ ಅದನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆಂದು ಹೇಳಿಕೊಂಡಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪರಮೇಶ್ವರ್ ಅವರು ಹಿರಿಯ ಸಹೋದರ ಶಿವಪ್ರಸಾದ್ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜು.26 ರಂದು ನಿಧನ ಹೊಂದಿದ್ದರು.