ರಾಜ್ಯ

60 ಸಾವಿರ ಮನೆಗಳಲ್ಲಿ 22 ಸಾವಿರ ಮನೆಗಳು ಉತ್ತರ ಕರ್ನಾಟಕಕ್ಕೆ ಮೀಸಲು- ಯು. ಟಿ. ಖಾದರ್

Nagaraja AB

ಬೆಂಗಳೂರು: ಮುಂದಿನ ವರ್ಷದೊಳಗೆ  ಪ್ರಧಾನಮಂತ್ರಿ ಅವಾಸ್ ಯೋಜನೆಯನ್ನು ಮುಖ್ಯಮಂತ್ರಿ ವಸತಿ ಯೋಜನೆ ಎಂದು ಮರುನಾಮಕರಣಗೊಳಿಸಿ  ನಗರ ಪ್ರದೇಶದ ಬಡವರಿಗಾಗಿ 60 ಸಾವಿರ ಮನೆಗಳನ್ನು ನಿರ್ಮಿಸಲು  ಸಿದ್ದತೆ ನಡೆಸಲಾಗಿದೆ.

ಜೆಡಿಎಸ್ -ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ವಸತಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು. 60 ಸಾವಿರ ಮನೆಗಳ   ಪೈಕಿ 22 ಸಾವಿರ ಮನೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಮೀಸಲಿರಿಸಲಾಗುವುದು ಎಂದು ವಸತಿ ಸಚಿವ ಯು. ಟಿ . ಖಾದರ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜಾರಿಗೊಳಿಸಲಾಗಿದ್ದ ಅನಿಲ ಭಾಗ್ಯ ಯೋಜನೆಯನ್ನು ಉಜ್ವಲಾ ಯೋಜನೆ ಎಂದು  ಕೇಂದ್ರದ ಬಿಜೆಪಿ ಸರ್ಕಾರ ಹೆಸರು ಬದಲಾಯಿಸಿದೆ ಎಂದು ಹೇಳಿದ ಅವರು, ಮನೆಗಳ ನಿರ್ಮಾಣಕ್ಕೆ ರಾಜ್ಯಸರ್ಕಾರ ಹೆಚ್ಚಿನ  ಅನುದಾನ ನೀಡುತ್ತಿದ್ದು, ಮುಖ್ಯಮಂತ್ರಿಗಳ ವಸತಿ ಯೋಜನೆ ಎಂದು ಏಕೆ ಮರುನಾಮಕರಣ ಮಾಡಬಾರದು ಎಂದು ಖಾದರ್ ಪ್ರಶ್ನಿಸಿದ್ದಾರೆ.

 ರಾಜೀವ್ ಗಾಂಧಿ ಅವಾಸ್  ಯೋಜನೆಯನ್ನು ಪ್ರಧಾನಮಂತ್ರಿ ಅವಾಸ್ ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ನಗರ ಪ್ರದೇಶದ ಬಡವರ ವಸತಿ ನಿರ್ಮಾಣಕ್ಕಾಗಿ ಕೇಂದ್ರ  ಹಾಗೂ ರಾಜ್ಯಸರ್ಕಾರ ಶೇ, 30 ರಷ್ಟು ಅನುದಾನ ನೀಡಲಿವೆ. ಶೇ.10 ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ಉಳಿದ ಶೇ.30 ರಷ್ಟನ್ನು  ಬ್ಯಾಂಕುಗಳು ಸಾಲ ನೀಡಲಿವೆ ಎಂದು ಖಾದರ್ ತಿಳಿಸಿದರು.

ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಕೇಂದ್ರಸರ್ಕಾರ 1.5 ಲಕ್ಷ ನೆರವಿನ ಹಣ ನೀಡಿದ್ದರೆ, ರಾಜ್ಯಸರ್ಕಾರ 2 ಲಕ್ಷ ನೀಡಲಿದೆ. ಸಾಮಾನ್ಯ ವರ್ಗದವರಿಗೆ  ಕೇಂದ್ರಸರ್ಕಾರ 1.2 ಲಕ್ಷ ನೀಡಿದ್ದರೆ  ರಾಜ್ಯಸರ್ಕಾರ 1.5 ಲಕ್ಷ ನೀಡಲಿದೆ ಎಂದು ಅವರು ಹೇಳಿದರು.

SCROLL FOR NEXT