ರಾಜ್ಯ

ಗೌರಿ ಲಂಕೇಶ್ ಪ್ರಕರಣ: ಬೆಳಗಾವಿ ಹೋಟೆಲ್ ಉದ್ಯಮಿ ಅರೆಸ್ಟ್!

Raghavendra Adiga
ಬೆಳಗಾವಿ/ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ತನಿಖೆ ನಡೆಸುತ್ತಿರುವ ವಿಶೇಷ ತನಿಕಾ ತಂಡ ಬೆಳಗಾವಿಯಲ್ಲಿ ಇನ್ನೋರ್ವ ಹಿಂದೂ ಪರ ಕಾರ್ಯಕರ್ತ ಭರತ್ ಕುರ್ವೆಯನ್ನು ಬಂಧಿಸಿದೆ. ಬೆಳಗಾವಿಯಲ್ಲಿರುವ ಸಂಭಾಜಿ ಗಲ್ಲಿಯ ನಿವಾಸಿ ಭರತ್ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಈತ ಕೊಲೆಯ ಯೋಜನೆ ರೂಪಿಸಿದ್ದನೆನ್ನಲಾದ ಅಮುಲ್ ಕಾಳೆ ಅವನೊಂದಿಗೆ ಸಂಪರ್ಕದಲ್ಲಿದ್ದರೆಂದು ಹೇಳಲಾಗಿದೆ.
ಇಷ್ಟಲ್ಲದೆ ಶೂಟರ್ ಪರಶುರಾಮ ವಾಗ್ಮೊರೆ ಸಹ ವಿಚಾರಣೆ ಸಮಯದಲ್ಲಿ ಭರತ್ ಹೆಸರನ್ನು ಹೇಳಿದ್ದನೆಂದು  ತಿಳಿದು ಬಂದಿದೆ. "ಇದುವರೆಗೆ ಕೊಲೆಯಲ್ಲಿ ಭಾಗಿಯಾಗಿರುವಕುರಿತಂತೆ ಭರತ್ ವಿರುದ್ಧ ಯಾವ ಸಾಕ್ಷಿಗಳು ಸಿಕ್ಕಿಲ್ಲವಾದರೂ ವಾಗ್ಮೊರೆ ಹಾಗೂ ಕಾಳೆ ನಿಡಿದ್ದ ಸುಳಿವಿನ ಆಧಾರದ ಮೇಲೆ ಇವರ ಬಂಧನವಾಗಿದೆ.`ಬೆಳಗಾವಿಯಲ್ಲಿ ಬಂಧಿತರಾದ ಭರತ್ ನನ್ನು ವಿಚಾರಣೆಗಾಗಿ ಬೆಂಗಳೂರಿನ ಸಿಐಡಿ ಕಚೇರಿಗೆ ಕರೆದೊಯ್ಯಲಾಗುತ್ತದೆ. ಖಾನಾಪುರದ ಅರಣ್ಯದಲ್ಲಿ ವಾಗ್ಮೊರೆ ಬಂದೂಕಿನ ಮೂಲಕ ಶೂಟಿಂಗ್ ತರಬೇತಿ ಪಡೆಯುವಾಗ ಭರತ್ ಅವನಿಗೆ ಆಶ್ರಯ ನೀಡಿದ್ದ" ಎಸ್ಐಟಿ  ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೂ ಮುನ್ನ ಎಸ್ಐಟಿ  ತಂಡ ಖಾನಾಪುರ ಅರಣ್ಯ ಪ್ರದೇಶದಲ್ಲಿ ಹಲವು ಸ್ಥಳಕ್ಕೆ ಭೇಟಿ ಕೊಟ್ಟಿದೆ.ವಾಗ್ಮೊರೆ ತರಬೇತಿ ಪಡೆದ ಸ್ಥಳಗಳನ್ನು ಸುತ್ತಿ ಮಾಹಿತಿ ಕಲೆ ಹಾಕಿದೆ.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಭರತ್ ಆಶ್ರಯ ಕಲ್ಪಿಸಿದ್ದನೆನ್ನಲಾಗಿದ್ದು ಗೌರಿ ಹತ್ಯೆ ಪ್ರಕರಣದಲ್ಲಿ ಎಸ್ಐಟಿ  ಇದುವರೆಗೆ ಹನ್ನೊಂದು ಜನರನ್ನು ಬಂಧಿಸಿದೆ. ಮುಖ್ಯ ಆರೋಪಿಯಾದ ಮಹಾರಾಷ್ಟ್ರ ಮೂಲದ ನಿಹಾಲ್ ಅಲಿಯಾಸ್ ದಾದಾ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದಾನೆ.
SCROLL FOR NEXT