ರಾಜ್ಯ

ಬೆಂಗಳೂರು: ಪ್ರತಿಷ್ಠಿತ ಮಂತ್ರಿ ಮಾಲ್​ನ 'ಬಿಬಾ' ಶಾಪ್ ನಲ್ಲಿ ಲೈಂಗಿಕ ಕಿರುಕುಳ; ಮಹಿಳೆ ದೂರು

Shilpa D
ಬೆಂಗಳೂರು: ನಗರದ ಪ್ರತಿಷ್ಠಿತ ಮಂತ್ರಿಮಾಲ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಮಾಲ್​ಗಳಲ್ಲಿ ಒಂದಾದ ಮಲ್ಲೇಶ್ವರಂನ ಮಂತ್ರಿ ಮಾಲ್​ನಲ್ಲಿಯೂ ಮಹಿಳಾ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರು ನೀಡಲಾಗಿದೆ..
ಮಂತ್ರಿಮಾಲ್ ನ ಮೊದಲ ಮಹಡಿಯಲ್ಲಿರುವ ಬಿಬಾ ಬಟ್ಟೆ ಅಂಗಡಿಯಲ್ಲಿ ಆಗಸ್ಟ್ 4 ರಂದು ಖರೀದಿಗೆ ಹೋದ ಮಹಿಳೆಗೆ ಅಲ್ಲಿನ ಸೇಲ್ಸ್​ಮ್ಯಾನ್​ ದೌರ್ಜನ್ಯ ಎಸಗಿದ್ದಾನೆ. ಸ್ನೇಹಿತರ ದಿನದ ಸಲುವಾಗಿ ಬಟ್ಟೆ ಖರೀದಿಸಲು ಹೋದ ಮಹಿಳೆಗೆ ಬಟ್ಟೆ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ಸೇಲ್ಸ್​ ಮ್ಯಾನ್​ ವರ್ತಿಸಿದ್ದಾನೆ ಎಂದು ದೂರಲಾಗಿದೆ. ಈ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
SCROLL FOR NEXT