ಬಳ್ಳಾರಿ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೆಸರಾಂತ ಅರ್ಥಶಾಸ್ತ್ರಜ್ಞ ಬಿ. ಶೇಷಾದ್ರಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಶೇಷಾದ್ರಿ ಡಾ. ನಂಜುಂಡಪ್ಪ ಸಮಿತಿಯ ಸದಸ್ಯರಾಗಿದ್ದರು. ನಂಜುಂಡಪ್ಪ ಸಮಿತಿ ಶಿಫಾರಸ್ಸು ಅನುಷ್ಠಾನ ಮೊದಲ ಉನ್ನತ ಸಮಿತಿಯ ಭಾಗವಾಗಿದ್ದರು.ಹಿಂದುಳಿದ ತಾಲೂಕುಗಳ ಮೌಲ್ಯಮಾಪನಕ್ಕೆ 35 ಅಂಶಗಳನ್ನು ನೀಡುವ ಮೂಲಕ ಅವುಗಳಿಗೆ ನೆರವಾಗಲು ಯತ್ನಿಸಿದ್ದರು.
ಹಂಪಿ ಕನ್ನ ಡ ವಿಶ್ವವಿದ್ಯಾನಿಲಯದ ಅಭಿವೃದ್ದಿಯ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು . ಅಲ್ಲದೇ, ಆರ್ಥಿಕತೆ ಮತ್ತು ಅಭಿವೃದ್ದಿಗೆ ಸಂಬಂಧಿಸಿದಂತೆ ಅನೇಕ ವರದಿಗಳನ್ನು ಬರೆದಿದ್ದಾರೆ.
ಬಳ್ಳಾರಿಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಪಿ ಜಿ ಸೆಂಟರ್ ಹಾಗೂ ಸಂವಿಧಾನದ 371 ( ಜೆ)ಯ ಅನುಕೂಲತೆ ಪಡೆದುಕೊಳ್ಳುವಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಮಾನವ ಅಭಿವೃದ್ದಿ ಮತ್ತು ಪ್ರಾದೇಶಿಕ ಅಸಮತೋಲನ ಸೇರಿದಂತೆ ಹಲವು ಪುಸ್ತಕಗಳನ್ನು ಬಿ. ಶೇಷಾದ್ರಿ ರಚಿಸಿದ್ದರು.ಇಂದು ಸಂಜೆ ಪಿ. ಶೇಷಾದ್ರಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಿತು.