ರಾಜ್ಯ

ತುಮಕೂರು: ಫೇಸ್ ಬುಕ್ ಲೈವ್ ನಲ್ಲಿ ಮದುವೆಯಾದ ಪ್ರೇಮಿಗಳು!

Lingaraj Badiger
ತುಮಕೂರು: ತಮ್ಮ ಮದುವೆಗೆ ಮನವೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಬಂದು ಸಪ್ತಪದಿ ತುಳಿದ ಅಪರೂಪದ ಘಟನೆ ನಡೆದಿದೆ. 
ತುಮಕೂರು ಜಿಲ್ಲೆಯ ಮಧುಗಿರಿ ನಿವಾಸಿ ಕಿರಣ್(25) ಹಾಗೂ ಅಂಜನಾ (19) ಪರಪ್ಪರ ಪ್ರೀತಿಸಿ ಫೇಸ್ ಬುಕ್ ಲೈವ್ ನಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಪ್ರೇಮ ವಿವಾಹಕ್ಕೆ ವಧು ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಫೇಸ್​ಬುಕ್‌ ಲೈವ್‌ ಮಾಡಿ ಮದುವೆ ಮಾಡಿಕೊಂಡಿದ್ದಾರೆ.
ಯುವತಿ ಅಂಜನಾ ತಂದೆ ತಿಮ್ಮರಾಜು ಎರಡು ದಿನದ ಹಿಂದೆ ಮಗಳು ಕಾಣೆಯಾಗಿದ್ದಾಳೆ ಎಂದು ಮಧುಗಿರಿ ಠಾಣೆಗೆ ದೂರು ನೀಡಿದ್ದರು. ಆದರೆ ಇದೀಗ ಮದುವೆಯಾಗಿರುವ ಜೋಡಿ ನಮ್ಮನ್ನು ಬೇರೆಯಾಗಿಸಲು ಪ್ರಯತ್ನಿಸಿದರೆ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
SCROLL FOR NEXT