ರಾಜ್ಯ

ಟೀ, ಕಾಫಿಗಳಿಗೆ ದುಬಾರಿ ವೆಚ್ಚ: ಪ್ರಮಾಣೀಕೃತ ಬಿಲ್ ಸಲ್ಲಿಸುವಂತೆ ಇಲಾಖೆಗಳಿಗೆ ಸರ್ಕಾರ ಸೂಚನೆ

Manjula VN
ಬೆಂಗಳೂರು: ಇಲಾಖೆಗಳಿಗೆ ಬರುವ ಅತಿಥಿಗಳಿಗೆ ನೀಡಲಾಗುತ್ತಿರುವ ಟೀ, ಕಾಫಿ ಹಾಗೂ ತಂಪು ಪಾನೀಯಗಳಲ್ಲಿ ಸರ್ಕಾರಕ್ಕೆ ಅಧಿಕಾರಿಗಳು ಭಾರೀ ಮೋಸ ಮಾಡುತ್ತಿರುವ ಶಂಕೆಗಳು ಮೂಡುತ್ತಿರುವ ಹಿನ್ನೆಲೆಯಲ್ಲಿ ಖರ್ಚುಗಳಿಗೆ ತಕ್ಕ ಪ್ರಮಾಣೀಕೃತ ಬಿಲ್ ಗಳನ್ನು ಸಲ್ಲಿಸುವಂತೆ ಆಯಾ ಇಲಾಖೆಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 
ಈ ಕುರಿತಂತೆ ಪ್ರತೀ ಇಲಾಖೆಗೂ ಸೂಚನೆ ನೀಡಿರುವ ಹಣಕಾಸು ಇಲಾಖೆ, ಇನ್ನು ಮಂದೆ ಇಲಾಖೆಗಳಲ್ಲಿ ನೀಡಲಾಗುವ ಟೀ ಹಾಗೂ ಕಾಫಿಗಳ ಕುರಿತ ವೆಚ್ಚಗಳ ಬಿಲ್ ಗಳ ಪ್ರತಿಯನ್ನು ಆಯಾ ಇಲಾಖೆ ಅಧಿಕಾರಿಗಳು ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡಬೇಕು. ಬಿಲ್ ಗಳನ್ನು ಪರಿಶೀಲನೆ ನಡೆಸಿದ ಬಳಿಕವಷ್ಟೇ ಆ ವೆಚ್ಚದ ಹಣವನ್ನು ಆಯಾ ಇಲಾಖೆಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದೆ ಮೂಲಗಳು ತಿಳಿಸಿವೆ. 
ಇಲಾಖೆಗಳ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು. ಇಲಾಖೆಗಳಲ್ಲಿ ನಡೆಯುವ ಕಾರ್ಯಗಳು ಹಾಗೂ ಸಭೆಗಳಿಗೆ ವಿತರಿಸುವ ಟೀ ಹಾಗೂ ಕಾಫಿ, ತಿಂಡಿಗಳಿಗೆ ಹಣವನ್ನು ನಿಗದಿ ಮಾಡಲಾಗಿದೆ. ಆದರೆ, ಕೆಲ ಇಲಾಖೆಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ವೆಚ್ಚದ ಹಣವನ್ನು ದುಪ್ಪಟ್ಟು ಮಟ್ಟದಲ್ಲಿ ತೋರಿಸುತ್ತಿದೆ ಎಂದು ಹೇಳಿದ್ದಾರೆ. 
SCROLL FOR NEXT