ರಾಜ್ಯ

ಉದಾನೆ ರಾಷ್ಟ್ರೀಯ ಹೆದ್ದಾರಿ ಜಲಾವೃತ: ಮಾರ್ಗ ಬದಲಿಸಿ ಕುಕ್ಕೆಗೆ ತೆರಳಿದ ಸಿಎಂ ಕುಮಾರ ಸ್ವಾಮಿ

Shilpa D
ಮಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರಿಗೂ ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಸಂಕಷ್ಟ ತಂದಿಟ್ಟಿದ್ದು ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾರ್ಗ ಬದಲಿಸಿ ತೆರಳಬೇಕಾಯಿತು. 
ಧರ್ಮಸ್ಥಳದಲ್ಲಿ ತಂಗಿದ್ದ ಸಿಎಂ ಕುಟುಂಬ ಮಂಗಳವಾರ ಬೆಳಗ್ಗೆ ಸುಬ್ರಹ್ಮಣ್ಯಕ್ಕೆ ಉಪ್ಪಿನಂಗಡಿ ಮೂಲಕ ತೆರಳಬೇಕಿತ್ತು.  ಉದಾನೆಯ  ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ  ರಸ್ತೆ ಸಂಪೂರ್ಣ ಮುಳುಗಡೆಯಾದ ಹಿನ್ನಲೆಯಲ್ಲಿ ಪೂತ್ತೂರಿಗೆ ತೆರಳಿ ಜಾಲ್ಸೂರು, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯಕ್ಕೆ ತೆರಳಬೇಕಾಯಿತು. 
ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಿ ಮುಖ್ಯಮಂತ್ರಿಗಳಿದ್ದ ಕಾರು ಸುಗಮವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು.
ಬೆಳಗ್ಗೆ 10 ಗಂಟೆಗೆ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಬೇಕಿತ್ತು, ಆದರೆ ರಸ್ತೆ ಜಲಾವೃತದಿಂದಾಗಿ ಮಾರ್ಗ ಬದಲಾವಣೆ ಮಾಡಿಕೊಂಡು ವಿಳಂಬವಾಗಿ ಕುಕ್ಕೆಗೆ ತಲುಪಿದರು,. 
ಸಿಎಂ ಎಚ್‌ಡಿಕೆ ಅವರು ನಾಗರ ಪಂಚಮಿಯ ಮುನ್ನಾದಿನ ತುಲಾಭಾರ, ಆಶ್ಲೇಷ ಬಲಿ, ಪಂಚಾಭಿಷೇಕ ಸೇವೆ ಸಲ್ಲಿಸಲಿದ್ದಾರೆ. ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
SCROLL FOR NEXT