ಬೆಂಗಳೂರು: 2000ನೇ ಇಸವಿ ಮಾರ್ಚ್ 5ರಂದು ಅಟಲ್ ಬಿಹಾರಿ ವಾಜಪೇಯಿ ಅವರು, ಕಾರವಾರದಲ್ಲಿ ಕೈಗಾ ಅಣುಶಕ್ತಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ್ದರು, ಇದು ದೇಶದ ಮೊದಲ ಅಣುಶಕ್ತಿ ಕೇಂದ್ರವಾಗಿತ್ತು.
1977ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ವಾಜಪೇಯಿ ಅವರನ್ನು ಬಂದಿಸಿ ಬಳ್ಳಾರಿ ಜೈಲಿಗೆ ಕರೆ ತರಲಾಗಿತ್ತು, ಒಂದು ರಾತ್ರಿಯನ್ನು ವಾಜಪೇಯಿ ಬಳ್ಳಾರಿ ಜೈಲಿನಲ್ಲಿ ಇತರ ಜನಸಂಘ ನಾಯಕರ ಜೊತೆ ಕಳೆದಿದ್ದರು,
ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ವಾಪಸ್ ತರಲು ವಾಜಪೇಯಿ ಅತಿ ಹೆಚ್ಚಿನ ಕಾರಣರಾಗಿದ್ದರು. ಹುಬ್ಬಳ್ಳಿಯಲ್ಲಿ ರೈಲ್ವೆ ವಲಯ ಸ್ಥಾಪಿಸುವ ಘೋಷಣೆ ಮಾಡಿದ ವಾಜಪೇಯಿ ನಂತರ ಅದನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿಯಿತು. ಅನಂತರ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಹೊಸ ರೈಲ್ವೆ ವಲಯದ ಪ್ರಧಾನ ಕಚೇರಿಯನ್ನು ಹುಬ್ಬಳ್ಳಿಗೆ ವಾಪಸ್ ಸ್ಥಳಾಂತರಿಸಲಾಯಿತು. 2003 ಫೆಬ್ರವರಿ 6ರಂದು ನೈರುತ್ಯ ರೈಲ್ವೆ ವಲಯವನ್ನು ಅಂದಿನ ಪ್ರಧಾನಿ ವಾಜಪೇಯಿ ಉದ್ಘಾಟಿಸಿದರು.
ಹುಬ್ಬಳ್ಳಿಯ ಜನಸಂಘ ನಾಯಕರ ಕುಟುಂಬಗಳ ಜೊತೆ ವಾಜಪೇಯಿ ಅವರು ವಿಶೇಷ ಬಾಂಧವ್ಯ ಹೊಂದಿದ್ದರು. 1960 ರಿಂದ 1998ರ ವರೆಗೆ ವಾಜಪೇಯಿ ಹುಬ್ಬಳ್ಳಿಗೆ ಬಂದರೇ ಛಗನ್ ರಾಜ್ ಮೆಹ್ತಾ ಮತ್ತು ಮಹಾದೇವ್ಸ ಜರ್ತಾಗ್ರರ್ ಅವರ ಮೆನೆಯಲ್ಲಿ ಉಳಿದುಕೊಳ್ಳುತ್ತಿದ್ದರು. 70ನೇ ವಯಸ್ಸಾದ ನಂತರ ರಾಜಕೀಯ ಬಿಡುವಂತೆ ನನ್ನ ತಂದೆಗೆ ವಾಜಪೇಯಿ ಸೂಚಿಸಿದ್ದರು, ಅದರಂತೆ ನನ್ನ ತಂದೆ ಅವರ ಆದೇಶ ಪಾಲಿಸಿದ್ದರು ಎಂದು ಮಹಾದೇವ್ಸ ಪುತ್ರ ಗಣಪತ್ಸ ಹೇಳಿದ್ದಾರೆ.