ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಸಿದ್ಧ ಆಹಾರ ತಯಾರಿಸಲು ಸಿದ್ಧತೆ ಆರಂಭಿಸಿದೆ.
ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಜನರಿಗೆ ಆಹಾರ ಒದಗಿಸಲು ಡಿಎಫ್ ಆರ್ ಎಲ್ ಸಹಯೋಗದೊಂದಿಗೆ ಸಿದ್ಧತೆ ನಡೆಸಲಾಗಿದೆ , ಶೀಘ್ರದಲ್ಲಿಯೇ ಆಹಾರದ ಪ್ಯಾಕಿಂಗ್ ಆರಂಭಿಸಲಾಗುವುದು ಎಂದು ಸಿಎಫ್ ಟಿಆರ್ ಐ ವಿಜ್ಞಾನಿ ಕೊಳ್ಳೇಗಾಲ ಶರ್ಮಾ ಹೇಳಿದ್ದಾರೆ.
ಮತ್ತೊಂದೆಡೆ ಪ್ರವಾಹ ಪೀಡಿತ ಕೇರಳದ ವೈನಾಡು ಹಾಗೂ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಬೆಡ್ ಶೀಟ್, ಕುಡಿಯುವ ನೀರು, ಬಟ್ಟೆ ಮತ್ತಿತರ ಅಗತ್ಯ ನೆರವು ನೀಡುವಂತೆ ವೈನಾಡು, ಕೊಡಗು ಹಾಗೂ ಮೈಸೂರಿನ ಜಿಲ್ಲಾಡಳಿತದಿಂದ ಮೈಸೂರಿನ ಭಾರತೀಯ ಕೈಗಾರಿಕೋದ್ಯಮಿಗಳ ಒಕ್ಕೂಟವನ್ನು ಕೋರಲಾಗಿದೆ.
ಇದಕ್ಕೆ ಸ್ಪಂದಿಸಿರುವ ಭಾರತೀಯ ಕೈಗಾರಿಕೋದ್ಯಮಿಗಳ ಕರ್ನಾಟಕ ಒಕ್ಕೂಟದ ಮುಖ್ಯಸ್ಥ ಮುತ್ತು ಕುಮಾರ್ ಮತ್ತು ಮೈಸೂರು ಘಟಕದ ಅಧ್ಯಕ್ಷ ಅರ್ಜುನ್ ರಂಗ ನೇತೃತ್ವದಲ್ಲಿ ಸಾಮಾಗ್ರಿಗಳನ್ನು ಸಂಗ್ರಹಿಸಲಾಗುತ್ತಿದೆ.