ಸಾಂದರ್ಭಿಕ ಚಿತ್ರ 
ರಾಜ್ಯ

ದೇವಾಲಯಗಳ ನಗರಕ್ಕೆ ವಿಶೇಷ ರೈಲು ಆರಂಭಿಸಲಿರುವ ಐಆರ್ ಸಿಟಿಸಿ

ಕೈಗೆಟಕುವ ದರದಲ್ಲಿ ದೇಶದ ಖ್ಯಾತ ದೇವಸ್ಥಾನಗಳ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ...

ಮೈಸೂರು: ಕೈಗೆಟಕುವ ದರದಲ್ಲಿ ದೇಶದ ಖ್ಯಾತ ದೇವಸ್ಥಾನಗಳ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(ಐಆರ್ ಸಿಟಿಸಿ) ನಿರ್ಧರಿಸಿದೆ. ಹತ್ತು ದಿನಗಳ ಪ್ಯಾಕೇಜ್ ಪ್ರವಾಸ ಇದಾಗಿದ್ದು 10,820 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.

ಈ ವಿಶೇಷ ರೈಲು ಸೆಪ್ಟೆಂಬರ್ 15ರಂದು ಬೆಂಗಳೂರಿನಿಂದ ಹೊರಟು ಮಧ್ಯ ಪ್ರದೇಶದ ಮಹಾಕಾಳೇಶ್ವರ ಮತ್ತು ಓಂಕಾರೇಶ್ವರ, ರಾಜಸ್ತಾನದ ಜೈಪುರ ಮತ್ತು ಪುಷ್ಕರ, ಮಹಾರಾಷ್ಟ್ರದ ತ್ರಿಯಂಬಕೇಶ್ವರ, ಪಧರ್ಪುರ ಮತ್ತು ಶಿರಿಡಿಗಳನ್ನು ಒಳಗೊಳ್ಳಲಿದೆ ಎಂದು ಐಆರ್ ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಕೇವಲ ಸಸ್ಯಾಹಾರ ತಿನಿಸುಗಳನ್ನು ಮಾತ್ರ ನೀಡಲಾಗುತ್ತದೆ. ಪ್ರತಿದಿನ ಒಂದು ಲೀಟರ್ ನೀರು ಮತ್ತು ಎರಡು ಬಾರಿ ಕಾಫಿ,ಟೀ ಒದಗಿಸಲಾಗುತ್ತದೆ. ರೈಲ್ವೆ ನಿಲ್ದಾಣಗಳಿಂದ ದೇವಸ್ಥಾನಗಳಿಗೆ ಹೋಗಲು ರೈಲ್ವೆ ನಿಗಮ ಪ್ರಯಾಣಿಕರಿಗೆ ಟ್ಯಾಕ್ಸಿ ಒದಗಿಸಲಿದೆ. ಪ್ರಯಾಣದುದ್ದಕ್ಕೂ 22 ಸದಸ್ಯರ ಪ್ರವಾಸಿ ಗೈಡ್ ಗಳು ಇರುತ್ತಾರೆ.

ಪ್ರಸ್ತುತ ಇದುವರೆಗೆ ಮೈಸೂರು ರೈಲು ನಿಲ್ದಾಣದಿಂದ ಸಾಕಷ್ಟು ಬುಕ್ಕಿಂಗ್ ಆಗಿಲ್ಲ. ಹೆಚ್ಚು ಪ್ರಯಾಣಿಕರು ಬುಕ್ಕಿಂಗ್ ಮಾಡಿಕೊಂಡರೆ ಮೈಸೂರು ರೈಲು ನಿಲ್ದಾಣಕ್ಕೆ ವಿಸ್ತರಿಸಲಾಗುವುದು. ಇಲ್ಲದಿದ್ದರೆ ಹಾಸನ ರೈಲು ನಿಲ್ದಾಣದಿಂದ ಪ್ರಯಾಣಿಕರು ಹತ್ತಬೇಕಾಗುತ್ತದೆ ಎಂದು ಐಆರ್ ಸಿಟಿಸಿ ಅಧಿಕಾರಿ ಇಮ್ರಾನ್ ಅಹ್ಮದ್ ತಿಳಿಸಿದ್ದಾರೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ವಾಯುಮಾರ್ಗ ಸಂಚಾರ ಪ್ಯಾಕೆಜ್ ನ್ನು ಕೂಡ ರಿಯಾಯಿತಿ ದರದಲ್ಲಿ ಐಆರ್ ಸಿಟಿಸಿ ಘೋಷಿಸಿದ್ದು ಜೋರ್ಡನ್, ಥೈಲ್ಯಾಂಡ್, ಈಜಿಪ್ಟ್ ಮತ್ತು ಶ್ರೀಲಂಕಾಗಳನ್ನು ಒಳಗೊಳ್ಳಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ