ರಾಜ್ಯ

ತುಮಕೂರು: ಲಾರಿ-ಬೈಕ್ ಡಿಕ್ಕಿ, ಯುವ ದಂಪತಿ ಸಾವು

Raghavendra Adiga
ತುಮಕೂರು: ಬೈಕ್ ಗೆ ಲಾರಿ ಡಿಕ್ಕಿಯಾಗಿ ಯುವ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಕೋರಾ ಬಳಿಯ ವಿ.ಆರ್.ಎಲ್ ಹೋಟೆಲ್ ಸಮೀಪ ಸಂಬವಿಸಿದ ಅಪಘಾತದಲ್ಲಿ  ಜಗದೀಶ್‌(32) ಮತ್ತು ಗಂಗಾದೇವಿ (28) ಎನ್ನುವ ದಂ<ಪತಿಗಳು ಮೃತಪಟ್ಟಿದ್ದಾರೆ.
ಮೃತರು ಹಿರಿಯೂರು ಮೂಲದವರಾಗಿದ್ದು ಬೆಂಗಳೂರಿನಲ್ಲಿ  ವಾಸವಿದ್ದರು. ದಂಪತಿಗೆ ಆರು ವರ್ಷದ ಮಗುವಿದ್ದು ಮಗು ಪ್ರಾಣಾಪಾಯದಿಂಡ ಪಾರಾಗಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನಿಂದ ಬೈಕಿನಲ್ಲಿ ಹಿರಿಯೂರಿಗೆ ತೆರಳುವಾಗ ತುಮಕೂರಿನ ಕೋರಾ ಬಳಿ ಬಂದಾಗ ವೇಗವಾಗಿ ಬಂದ ಲಾರಿಯು  ಹಿಂದಿಬಯಿಂದ ಬೈಕಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ಹೊಡೆತಕ್ಕೆ ಬೈಕ್ ನಲ್ಲಿದ್ದ ದಂಪತಿ  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT