ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ 
ರಾಜ್ಯ

'ನನ್ನ ತಾಯಿ ಕಾಪಾಡಿ, ಕಾಪಾಡಿ ಎಂದು ಕೂಗಿಕೊಳ್ಳುತ್ತಿದ್ದರೂ ನಾನು ಅಸಹಾಯಕನಾಗಿದ್ದೆ'

ಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೊಡಗು ಜಿಲ್ಲಾಡಳಿತ ಘೋಷಿಸಿದೆ. ...

ಮಡಿಕೇರಿ: ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಉಂಟಾಗಿರುವ  ಪ್ರವಾಹದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೊಡಗು ಜಿಲ್ಲಾಡಳಿತ ಘೋಷಿಸಿದೆ. ಪ್ರವಾಹದಲ್ಲಿ ಕಣ್ಣೆದುರೇ ತನ್ನ ತಾಯಿ ಕೊಚ್ಚಿಹೋದ ಮನಕಲಕುವ ಘಟನೆ ನಡೆದಿದೆ.
ಹೆಬ್ಬಟ್ಟಗೇರಿಯಲ್ಲಿ ಮಿಟ್ಟು ಗಣಪತಿ ಎಂಬುವರ ತಾಯಿ ಮಿನ್ನಂಡ ಉಮ್ಮವ್ವ ತನ್ನನ್ನು ರಕ್ಷಿಸುವಂತೆ ಮಗನ ಸಹಾಯ ಕೋರಿದರು, ಆದರೆ ಭೂಕುಸಿತದಿಂದ ಉಂಟಾದ ಪ್ರವಾಹದಲ್ಲಿ ಅವರ ಮನೆಯ ಜೊತೆ ತಾಯಿಯೂ ಕೊಚ್ಚಿ ಹೋಗಿದ್ದಾರೆ.
ಭೂಕುಸಿತದ ಅವಶೇಷಗಳಡಿ ಸಿಲುಕಿದ ಆಕೆ ಸಹಾಯ ಮಾಡುವಂತೆ ಕೈ ಬೀಸುತ್ತಿದ್ದಳು, ಆಕೆ ನನ್ನ ಕಣ್ಣುಮುಂದೆ ಕೊಚ್ಚಿಹೋಗುತ್ತಿದ್ದರೂ ನಾನು ಏನು ಮಾಡಲಾಗದ ಅಸಹಾಯಕನಾಗಿದ್ದೆ ಎಂದು ಗಣಪತಿ ಹೇಳಿದ್ದಾರೆ.
ಗಣಪತಿ ತನ್ನ ತಾಯಿ , ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಹೆಬ್ಬಟ್ಟಗೇರಿಯ ಮನೆಯಲ್ಲಿ ವಾಸವಿದ್ದರು,.ರೈತ ನಾಗಿರುವ ಗಣಪತಿ 6 ತಿಂಗಳ ಹಿಂದೆ ಹೊಸ ಮನೆ ಕಟ್ಟಿಸಿ ಅದರಲ್ಲಿ ಬಾಳಿ ಬದುಕಬೇಕೆಂಬ ಆಸೆಯಲ್ಲಿದ್ದರು, ಆದರೆ ವಿಧಿ ಲಿಖಿತವೇ ಬೇರೆಯಾಗಿತ್ತು.
ಆಗಸ್ಟ್ 15ರ ಬೆಳಗ್ಗೆ ಗಣಪತಿ ಅವರು ಕುಟುಂಬ ಉಪಹಾರ ಸೇವಿಸುತ್ತಿತ್ತು, ಒಬ್ಬ ವ್ಯಕ್ತಿ ಬಂದು ಮಡಿಕೇರಿಗೆ ಹೋಗುವ ದಾರಿ ತೋರಿಸಿ ಎಂದು ಗಣಪತಿ ಅವರಿಗೆ ಕೇಳಿದ್ದಾನೆ, ಈ ವೇಳೆ ಗಣಪತಿ ಅವರ ಕುಟುಂಬಕ್ಕೆ ದೊಡ್ಡ ಶಬ್ದ ಕೇಳಿ ಬಂದಿದೆ. ದೂರದಲ್ಲಿ ಒಂದು ಮರ ಬಿದ್ದಿರುವುದು ಕಾಣಿಸಿತು. 
ದೊಡ್ಡದಾದ ಭೂಕುಸಿತ ನಾವು ಮುಂದೆ ಹೆಜ್ಜೆ ಇಡದಂತೆ ನಿಲ್ಲಿಸಿತು. ಈ ವೇಳೆ ನಮ್ಮ ತಾಯಿ ಕೆಳಗಿನ ಮನೆಯಲ್ಲಿದ್ದರು. ಭೂಕುಸಿತ ಆಕೆಯನ್ನು ಎಳೆದುಕೊಂಡಿತು. ಆಕೆಯ ಎರಡು ಕೈಗಳು ಸಹಾಯ ಮಾಡುವಂತೆ ನನ್ನನ್ನು ಕರೆಯುತ್ತಿತ್ತು, ಜೊತೆಗೆ ಆಕೆ ಕಾಪಾಡಿ ಎಂದು ಕೂಗುತ್ತಿದ್ದರು, ನಾನು ಆಕೆ ಇರುವಲ್ಲಿಗೆ ತಲುಪುವಷ್ಟರಲ್ಲಿ ಭೂ ಕುಸಿತದ ಮಣ್ಣಿನ ಜೊತೆ ಅಮ್ಮ ಕಿಮೀ ದೂರ ಕೊಚ್ಚಿಹೋದಳು ಎಂದು ಗಣಪತಿ ಒದ್ದೆ ಕಣ್ಣಿನಿಂದ ಸ್ಮರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT