ಸಂಗ್ರಹ ಚಿತ್ರ 
ರಾಜ್ಯ

ಬೈಕ್ ಮೇಲೆ ಬಿದ್ದ ಬೀದಿ ದೀಪದ ಕಂಬ: 14 ವರ್ಷದ ಬಾಲಕಿ ಸಾವು

ಪಾದಚಾರಿ ಮಾರ್ಗದಲ್ಲಿದ್ದ ಬೀದಿ ದೀಪದ ಕಂಬವೊಂದು ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಮಹದೇವಪುರ ವಲಯದ ಕಾಡುಗೋಡಿಯಲ್ಲಿ ನಡೆದಿದೆ...

ಬೆಂಗಳೂರು: ಪಾದಚಾರಿ ಮಾರ್ಗದಲ್ಲಿದ್ದ ಬೀದಿ ದೀಪದ ಕಂಬವೊಂದು ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಮಹದೇವಪುರ ವಲಯದ ಕಾಡುಗೋಡಿಯಲ್ಲಿ ನಡೆದಿದೆ. 
ಯುವರಾಣಿ (14) ಮೃತಪಟ್ಟ ಬಾಲಕಿಯಾಗಿದ್ದಾಳೆ. ಭಾನುವಾರಿ ಬಾಲಕಿ ತನ್ನ ತಂದೆ ಹರೀಶ್ ಅವರೊಂದಿಗೆ ಶಿವನಾಪುರದಲ್ಲಿರುವ ಸಂಬಂಧಿಕರ ಮನೆ ಗೃಹ ಪ್ರವೇಸಕ್ಕೆ ತೆರಳಿ ಬೈಕ್ ನಲ್ಲಿ ವಾಪಸ್ ಆಗುತ್ತಿದ್ದಳು. ಈ ವೇಳೆ ಕಾಡುಗೋಡಿಯ ದಿನ್ನೂರು ಕ್ರಾಸ್ ಬಳಿಯ ಕಬ್ಬಿಣದ ಬೀದಿ ದೀಪದ ಕಂಬ ಮುರಿದು ಬೈಕ್'ನಲ್ಲಿ ತೆರಳುತ್ತಿದ್ದ ಹರೀಶ್ ಹಾಗೂ ಬಾಲಕಿ ಮೇಲೆ ಬಿದ್ದಿದೆ. 
ಬೀದಿ ದೀಪದ ಕಂಬ ಬಿದ್ದ ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಬಾಲಕಿಯ ತಂದೆಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ. 
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಬಾಲಕಿ ಸಾವಿಗೆ ಕಾರಣ ಎಂದು ಆರೋಪಿಸಿ ಇದೀಗ ಬಾಲಕಿಯ ಪೋಷಕರು ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಸೂಚನೆಗೆ ಕ್ಯಾರೆ ಎನ್ನದ ಇಸ್ರೇಲ್: ಇರಾನ್ ಮೇಲೆ ವೈಮಾನಿಕ ದಾಳಿ; ಟೆಹ್ರಾನ್ ವಾಯುಪ್ರದೇಶ ಬಂದ್, ಯುದ್ಧ ಪುನರಾರಂಭ ಸಾಧ್ಯತೆ

2028ರ ಚುನಾವಣಾ ತಯಾರಿಯಲ್ಲಿ ಕಾಂಗ್ರೆಸ್! ಬಿಜೆಪಿ-ಜೆಡಿಎಸ್ ಮತ ವಿಭಜನೆಯ ಚಿಂತೆ; ಉಳಿಯುತ್ತಾ NDA ಮೈತ್ರಿ?

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಕ್ಷಿಪಣಿ ದಾಳಿ, ಗಾಜಾ ಗಡಿದ್ವಾರ ಬಂದ್; ‘ಪ್ರತಿದಾಳಿ ಬೇಡ’- ನೆತನ್ಯಾಹುಗೆ ಟ್ರಂಪ್ ಖಡಕ್ ಸಂದೇಶ

ಸಾಮಾನ್ಯವಾದ ನೀರಿನ ಬಾಟಲಿಗೂ ವಿಮಾನ ನಿಲ್ದಾಣಗಳು ಹೆದರುತ್ತವೇಕೆ?

'You're Crooked': ಪರ್ತಕರ್ತೆ ಕೇಳಿದ ಪ್ರಶ್ನೆಗೆ ಬೆಚ್ಚಿದ ಅಮೆರಿಕ ಅಧ್ಯಕ್ಷ, TV ಸಂದರ್ಶನ ಮೊಟಕುಗೊಳಿಸಿ, ಮಧ್ಯದಲ್ಲಿಯೇ ಹೊರನಡೆದ ಟ್ರಂಪ್! Video

SCROLL FOR NEXT