ನವದೆಹಲಿ: ಮಹಾದಾಯಿ ನ್ಯಾಯಾಧೀಕರಣದ ತೀರ್ಪನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಿರುವ ಗೋವಾ ಸರ್ಕಾರ ರಾಜ್ಯದ ವಿರುದ್ಧ ಅಸಹಕಾರ ಅರ್ಜಿ ಸಲ್ಲಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ.
ನ್ಯಾಯಾಧೀಕರಣ ಅಥವಾ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನಡೆದಿಲ್ಲ ಎಂದು ಕರ್ನಾಟಕ ಸ್ಪಷ್ಟನೆ ನೀಡಿದ್ದರೂ ಗೋವಾ ಕರ್ನಾಟಕದ ವಿರುದ್ಧ ಅರ್ಜಿ ಸಲ್ಲಿಸಿದೆ.
ನ್ಯಾಯಾಧೀಕರಣ ತೀರ್ಪು ನೀಡುವುದಕ್ಕೂ ಮುನ್ನ ಕರ್ನಾಟಕ ಸರ್ಕಾರ ಮಹಾದಾಯಿಯನ್ನು ಮಲಪ್ರಭಾಗೆ ಅಕ್ರಮವಾಗಿ ನೀರು ಹರಿಸಿದೆ ಎಂದು ಹೇಳಿರುವ ಗೋವ ಸರ್ಕಾರ, ಈ ಮೂಲಕ ಕರ್ನಾಟಕ ನ್ಯಾಯಾಧೀಕರಣದ ತೀರ್ಪಿನ ವಿರುದ್ಧ ನಡೆದಿದೆ ಎಂದು ಆರೋಪಿಸಿದೆ.
ಕಳೆದ ವರ್ಷ ಕೂಡ ಗೋವಾ ಸರ್ಕಾರ ರಾಜ್ಯದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.