ಮಡಿಕೇರಿ: ಮಹಾಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ ನಿರಾಶ್ರಿತರಾಗಿರುವ ಕೊಡಗಿನ ಸಂತ್ರಸ್ತರಿಗಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ತಾವೇ ಖುದ್ದಾಗಿ ಸಾಮಗ್ರಿಗಳನ್ನು ಜೋಡಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರಳತೆ ಮತ್ತು ಸಜ್ಜನಿಕೆಗೆ ಹೆಸರುವಾಸಿಯಾಗಿರುವ ಸುಧಾಮೂರ್ತಿ ಅವರು ಪ್ರವಾಹಕ್ಕೆ ತುತ್ತಾಗಿ, ಸಂಕಷ್ಟ ಅನುಭವಿಸುತ್ತಿರುವ ಕೊಡಗಿನ ಜನರಿಗೆ ಪರಿಹಾರ ಒದಗಿಸಲು ಸಜ್ಜಾಗಿದ್ದು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸುಧಾಮೂರ್ತಿ ಅವರು ತಾವೇ ಖುದ್ದಾಗಿ ಸಾಮಗ್ರಿಗಳನ್ನು ಜೋಡಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇವರನ್ನು ನೋಡಿ ಕಲಿಯೋದು ತುಂಬಾ ಇದೆ. ನೀವು ಗ್ರೇಟ್ ಅಮ್ಮ ಎಂದು ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಹಲವರು ಸುಧಾಮೂರ್ತಿ ಅವರ ನಡೆಯನ್ನು ಶ್ಲಾಘಿಸಿದ್ದಾರೆ.
ಮಹಾಮಳೆಯಿಂದಾಗಿ ಕೊಡಗಿನಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಸಾವಿರಾರು ಜನ ನಿರಾಶ್ರಿತರಾಗಿದ್ದು ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯ ನಡೆಯುತ್ತಿದೆ. ರಾಜ್ಯಾದ್ಯಂತ ಜನರು ಕೊಡಗಿನ ಜನರ ಕಣ್ಣೀರಿಗೆ ಮರುಗಿದ್ದು ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಿದ್ದಾರೆ.