ರಾಜ್ಯ

ವೃದ್ಧ ತಾಯಿಯನ್ನು ಬೈಕ್ ನಲ್ಲಿಯೇ 25 ಸಾವಿರ ಕಿ.ಮೀ. ತೀರ್ಥಯಾತ್ರೆ ಮಾಡಿಸಿದ ಪುತ್ರ!

Nagaraja AB

ಬೆಂಗಳೂರು :ತಾಯಿಯನ್ನು ಆಳವಾಗಿ ಪ್ರೀತಿಸುವ  39  ವರ್ಷದ  ಡಿ.ಕೃಷ್ಣ ಕುಮಾರ್  ತನ್ನ 20 ವರ್ಷ ಹಳೆಯದಾದ ಬಜಾಜ್ ಚೇತಕ್  ಸ್ಕೂಟರ್ ನಲ್ಲಿಯೇ    ಕೂರಿಸಿಕೊಂಡು 25 ಸಾವಿರ ಕೀ. ಮೀ. ತೀರ್ಥಯಾತ್ರೆ ಮಾಡುವ ಮೂಲಕ ಆಧುನಿಕ ಕಾಲದ ಶ್ರವಣ್ ಕುಮಾರ್ ಎಂದು ಕರೆಯಿಸಿಕೊಳ್ಳುತ್ತಿದ್ದಾರೆ.

ಚೂಡಾರತ್ನ ಎಂಬ 70 ವರ್ಷದ ವೃದ್ದ ತಾಯಿಯನ್ನು ಏಳು ತಿಂಗಳು, ಒಂದು ವಾರಗಳ ಕಾಲ ದಕ್ಷಿಣ ವಿಂದ್ಯ ಭಾಗದಲ್ಲಿನ  ಬಹುತೇಕ ಎಲ್ಲಾ ರಾಜ್ಯಗಳ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ.

ಯಾವುದೇ ಹೋಟೆಲ್, ಅಥವಾ ವಸತಿ ಗೃಹಗಳಲ್ಲಿ ಎಂದಿಗೂ ಇರಲಿಲ್ಲ, ಬದಲಾಗಿ ಬಳಲಿದ ದೇಹಕ್ಕಾಗಿ ವಿಶ್ರಾಂತಿ ಪಡೆಯಲು ಮಠಗಳನ್ನು ಹುಡುಕುತ್ತಿದ್ದೆವು ಎಂದು ಕೃಷ್ಣಕುಮಾರ್  ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಾತೃ ಸೇವಾ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಈ ವರ್ಷದ ಜನವರಿ 16 ರಿಂದ ಯಾತ್ರೆ ಆರಂಭಿಸಿದ ಈ ತಾಯಿ ಮಗ,  ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮತ್ತು ಮಹಾರಾಷ್ಟ್ರಗಳ  ಎಲ್ಲಾ ದೇವಾಲಯಗಳನ್ನು ಸುತ್ತಿದ್ದಾರೆ .

 ಬೆಂಗಳೂರಿಗೆ ವಾಪಾಸ್ಸಾಗುವಾಗ  ಹುಬ್ಬಳ್ಳಿಯಲ್ಲಿ   ದಿ ನ್ಯೂ  ಇಂಡಿಯನ್ ಎಕ್ಸ್ ಪ್ರೆಸ್  ನೊಂದಿಗೆ ಅವರು ತಮ್ಮ ಸುಧೀರ್ಘ ಕಾಲದ ಪ್ರಯಾಣ ಕುರಿತು ಮಾಹಿತಿ ಹಂಚಿಕೊಂಡರು.
ಸ್ಕೂಟರ್ ಹಳೆಯದಾದರೂ ಅದರಲ್ಲಿ ಹಣು, ಅಕ್ಕಿ, ಚಾಕು, ರೈನ್ ಕೋಟ್, ಮತ್ತಿತರ ವಸ್ತುಗಳನ್ನು ಇಟ್ಟುಕೊಳ್ಳಬಹುದು. ದೇವಾಲಯ ನೋಡುತ್ತಿದ್ದರೆ ಹೋಟೆ  ಹಸಿವು ಕಾಣಿಸುವುದೇ ಇಲ್ಲ. ನಮ್ಮ ಬಗ್ಗೆ ತಿಳಿದವರು ಮನೆಗೆ ಆಹ್ವಾನಿಸುತ್ತಿದ್ದರು. ತಾಯಿಯೊಂದಿಗೆ ಈ ಯಾತ್ರೆಯು ಅವರಿಗೆ ಜನರ ಮನಃಪೂರ್ವಕತೆಯನ್ನು ತೋರಿಸಿತು ಎಂದು ಕೃಷ್ಣಕುಮಾರ್ ಸಂತಸ ವ್ಯಕ್ತಪಡಿಸಿದರು.
 ಕೃಷ್ಣಕುಮಾರ್ ಹಾಗೂ ಆತನ ತಾಯಿ  ಹುಬ್ಬಳ್ಳಿ ಮಾರ್ಗದಲ್ಲಿನ ಹಲವು ದೇವಾಲಯಗಳಿಗೆ ಭೇಟಿ ನೀಡಿ ಆಗಸ್ಟ್ 30 ರಂದು ಬೆಂಗಳೂರು ತಲುಪಲಿದ್ದಾರೆ
SCROLL FOR NEXT