ಕೊಡಗಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಭೇಟಿ
ಮಡಿಕೇರಿ: ಮಹಾಮಳೆ, ಭೂ ಕುಸಿತ, ಪ್ರವಾಹದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದಾರೆ.
ಹಾನಿ ಪ್ರದೇಶಗಳ ವೀಕ್ಷಣೆ ಮಾಡುತ್ತಿದ್ದು,ಈ ವೇಳೆ ಸ್ಥಳಕ್ಕೆ ತೆರಳದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವುದು ಮಾಧ್ಯಮ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಯಿತು.
ಸೋಮವಾರ ಪೇಟೆಯ ಮಾದಾಪುರ ಬಳಿ ಸಚಿವೆ ಅವರು ಹಾನಿ ಪ್ರದೇಶ ವೀಕ್ಷಿಸಿದ್ದು, ಸಂತ್ರಸ್ತರ ಸಮಸ್ಯೆ ಆಲಿಸುತ್ತಿದ್ದಾರೆ. ಎಸ್‌ಪಿ ಸುಮನ್ ಅವರ ಸೂಚನೆಯ ಮೇರೆಗೆ ಮಾಧ್ಯಮಗಳಿಗೆ ಚಿತ್ರೀಕರಣ ನಡೆಸದಂತೆ ಪೊಲೀಸರು ತಡೆದಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 8.20 ಕ್ಕೆ ಮೈಸೂರಿನಿಂದ ಹೊರಟು 9 ಕ್ಕೆ ಹಾರಂಗಿ ಹೆಲಿಪ್ಯಾಡ್ ತಲುಪಿ ಅಲ್ಲಿಂದ ಕುಶಾಲನಗರಕ್ಕೆ ಆಗಮಿಸಿದರು
ನಿರ್ಮಲಾ ಸೀತರಾಮನ್ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದಾರೆ.
ಗುರುವಾರ ವಿರಾಮ ನೀಡಿ ರಕ್ಷಣಾ ಕಾರ್ಯ, ಪರಿಹಾರ ಕಾರ್ಯಕ್ಕೆ ನೆರವಾಗಿದ್ದ ಮಳೆ ಇಂದು ಮತ್ತೆ ಆರಂಭವಾಗಿದೆ.