ರಾಜ್ಯ

ಬದುಕು ಕಸಿದುಕೊಂಡ ಪ್ರವಾಹ: ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ಕೊಡಗು

Shilpa D
ಕೊಡಗು: ನೂರಾರು ಮಂದಿ ಮನೆ ಮಠ ಕಳೆದುಕೊಂಡಿದ್ದು, ಹಲವು ಮಂದಿ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ, ಪ್ರವಾಹ ಪೀಡಿತ ಕೊಡಗು ಜಿಲ್ಲೆ  ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೂ 1,800 ಮಂದಿ ನಿರಾಶ್ರಿತರ ಶಿಬಿರಗಳಿಂದ ತಮ್ಮ ತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದಾರೆ ಎಂದು  ರಾಜ್ಯ ವಿಪತ್ತು ಪರಿಹಾರ ಆಯುಕ್ತ ಗಂಗಾರಾಮ್ ಬಡೇರಿಯಾ ಹೇಳಿದ್ದಾರೆ.
51 ತಾತ್ಕಾಲಿಕ ಪರಿಹಾರ ಕೇಂದ್ರ ನಿರ್ಮಾಣವಾಗಿದ್ದು, ಕಳೆದ ವಾರ ಸುಮಾರು 5,041 ಜನ ಆಶ್ರಯ ಪಡೆದಿದ್ದರು. ಅದರಲ್ಲಿ 3,227 ಜನ ವಾಸವಿದ್ದಾರೆ.
ಆಗಸ್ಟ್ 14 ರಿಂದ 22 ವರೆಗೆ ಸುರಿದ ಭಾರೀ ಮಳೆಗೆ ಪ್ರವಾಹ ಹಾಗೂ ಭೂ ಕುಸಿತ ಉಂಟಾದ ಪರಿಣಾಮ ವಾರದ ಹಿಂದೆ ಪರಿಹಾರ ಕೇಂದ್ರ ತೆರೆಯಲಾಗಿದೆ. 
ಭಾರತೀಯ ಸೇನೆ, ಏರ್ ಫೋರ್ಸ್ ನೌಕಾದಾಳ., ಸೇರಿದಂತೆ ಎಲ್ಲಾ ಎಜೆನ್ಸಿಗಳನ್ನು ವಾಪಸ್ ಕಳುಹಿಸಲು ಜಿಲ್ಲಾಧಿಕಾರಿ ಶ್ರೀವಿದ್ಯಾ ನಿರ್ಧರಿಸಿದ್ದಾರೆ. ರಾಷ್ಟ್ರೀ ವಿಪತ್ತು ಪರಿಹಾರ ಪಡೆ ಮಾತ್ರ ಕೊಡಗಿನಲ್ಲಿರಿಸಿಕೊಳ್ಳಲು ನಿರ್ಧರಿಸಲಾಗಿದೆ.
SCROLL FOR NEXT