ರಾಜ್ಯ

ಕೊಡಗು ಪ್ರವಾಹ: ಸಿಕ್ಕಿಹಾಕಿಕೊಂಡಿರುವ ಪ್ರಾಣಿಗಳನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿ

Sumana Upadhyaya

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾದ ನಂತರ ಸಿಕ್ಕಿಹಾಕಿಕೊಂಡಿದ್ದ ಗ್ರಾಮಸ್ಥರನ್ನು ಕಾಪಾಡುವ ಕೆಲಸ ಮುಗಿದಿರಬಹುದು. ಆದರೆ ಪ್ರಾಣಿಗಳನ್ನು ಕಾಪಾಡುವ ಕಾರ್ಯ ಮಾತ್ರ ಮುಂದುವರಿದಿದೆ. ಜಿಲ್ಲಾಡಳಿತ ಮತ್ತು ಕ್ಯೂಪಾ ಸಿಬ್ಬಂದಿ ಪ್ರಾಣಿಗಳನ್ನು ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ನೀರು ತುಂಬಿಕೊಂಡಿರುವ ಮತ್ತು ಭೂಕುಸಿತವಾಗಿರುವ ಕಡೆಗಳಲ್ಲಿ ಪ್ರಾಣಿಗಳನ್ನು ರಕ್ಷಿಸಲು ಕ್ಯೂಪಾ ಸಿಬ್ಬಂದಿ ರಸ್ತೆಗಳನ್ನು ಮತ್ತು ಕಟ್ಟಡಗಳನ್ನು ನಿರ್ಮಿಸಿ ದನಕರುಗಳನ್ನು ಮತ್ತು ಇತರ ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ. ಸರ್ಕಾರಿ ಪಶು ವೈದ್ಯರ ತಂಡ ಪ್ರತಿದಿನ ಬೆಳಗ್ಗೆ ಸಿಕ್ಕಿಹಾಕಿಕೊಂಡಿರುವ ಪ್ರಾಣಿಗಳಿಗೆ ಆಹಾರ ಒದಗಿಸುತ್ತಾರೆ.

ಪಶುವೈದ್ಯರ ತಂಡ ಇದುವರೆಗೆ ಮುಕ್ಕೋಡ್ಲು ಮತ್ತು ಮಕ್ಕಂದೂರು ಗ್ರಾಮಗಳಿಗೆ ಭೇಟಿ ನೀಡಿ 22 ದನಕರುಗಳನ್ನು ರಕ್ಷಿಸಿದ್ದಾರೆ. ನಿನ್ನೆ ಐವರು ಪಶುವೈದ್ಯರ ತಂಡ ಮತ್ತು ಇನ್ಸ್ ಪೆಕ್ಟರ್ ಗಳು 2ನೇ ಮೊನ್ನಂಗೇರಿ ಗ್ರಾಮಕ್ಕೆ ಭೇಟಿ ನೀಡಿದರು.

2ನೇ ಮೊನ್ನಂಗೇರಿ ಪ್ರದೇಶಕ್ಕೆ ಇದುವರೆಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡವಾಗಲಿ, ಸಚಿವರಾಗಲಿ ಅಥವಾ ಮಾಧ್ಯಮ ಪ್ರತಿನಿಧಿಗಳಾಗಲಿ ಭೇಟಿ ನೀಡಿರಲಿಲ್ಲ. ಅಲ್ಲಿಗೆ ಇದೀಗ ವೈದ್ಯರು ಜೀಪ್ ನಲ್ಲಿ ತೆರಳಿ 5 ಕೆಜಿ ದನಕರುಗಳಿಗೆ ಆಹಾರ ತೆಗೆದುಕೊಂಡು ಹೋಗಿ ತಿನ್ನಿಸಿ ಬಂದಿದ್ದಾರೆ.

ನಿರ್ಜನ ಪರ್ವತ ಪ್ರದೇಶದಲ್ಲಿ ಸುಮಾರು 2 ಕಿಲೋ ಮೀಟರ್ ನಡೆದುಕೊಂಡು ಹೋದ ಮೇಲೆ ವೈದ್ಯರ ತಂಡಕ್ಕೆ ಒಂದು ಮನೆ ಕಾಣಸಿಕ್ಕಿತು. ಅಲ್ಲಿ ಎರಡು ನಾಯಿಗಳಿದ್ದವು. ಹಸುಗಳಿಗೆ ವೈದ್ಯರ ತಂಡ ಆಹಾರ ಒದಗಿಸಿದರೆ ನಾಯಿಗಳು ಆಹಾರವಿಲ್ಲದೆ ಅನೇಕ ದಿನಗಳಿಂದ ಹಸಿದುಕೊಂಡು ಇದ್ದವು. ಅವುಗಳಿಗೆ ಹೋದವರ ತಂಡ ತೆಗೆದುಕೊಂಡು ಹೋಗಿದ್ದ ಕೆಲವು ಆಹಾರಗಳನ್ನು ಉಣಿಸಿದರು.

ನಂತರ ವೈದ್ಯರು ಮತ್ತು ಇನ್ಸ್ ಪೆಕ್ಟರ್ ಗಳ ತಂಡವು ಹಲವು ಮನೆಗಳಿಗೆ ಹೋಗಿ ಅಲ್ಲಿನ ಹಸುಗಳಿಗೆ ಆಹಾರ ನೀಡಿದರು. ದಾರಿಯಲ್ಲಿ ಹೋಗುವಾಗ ಅತೀವ ಶೀತ ಮತ್ತು ಕಡಿಮೆಯಾದ ದೇಹದ ಉಷ್ಣತೆಯಿಂದ ಮೃತಪಟ್ಟ ಒಂದು ಕರು ಮತ್ತು ಎರಡು ದನಗಳನ್ನು ನೋಡಿದೆವು ಎನ್ನುತ್ತಾರೆ ಡಾ ಪ್ರಸನ್ನ.

ದಾರಿಯಲ್ಲಿ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿಹಾಕಿಕೊಂಡಿದ್ದ ಹಸುವಿಗೆ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದೆ. ನಮ್ಮ ಭೇಟಿಯ ಉದ್ದೇಶ ಪ್ರವಾಹ ಮತ್ತು ಭೂಕುಸಿತವಾದ ಸ್ಥಳದಲ್ಲಿ ಸಿಲುಕಿಹಾಕಿಕೊಂಡಿರುವ ಹಸುಗಳನ್ನು ಕಾಪಾಡುವುದು ಮತ್ತು ಅವುಗಳಿಗೆ ಆಹಾರ ಒದಗಿಸುವುದು ಎಂದು ಡಾ ಪ್ರಸನ್ನ ಹೇಳುತ್ತಾರೆ.

SCROLL FOR NEXT