ರಾಜ್ಯ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಬಿಜಿಎಸ್ ಆಸ್ಪತ್ರೆಗೆ ದಾಖಲು

Srinivasamurthy VN
ತುಮಕೂರು: ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯದಸ್ಸಿ ಮತ್ತೆ ವ್ಯತ್ಯಯವಾಗಿದ್ದು ಅವರನ್ನು ಬೆಂಗಳೂರಿನ ಬಿ.ಜಿ.ಎಸ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶ್ರೀಗಳಿಗೆ ವಯೋ ಸಹಜ ಸಮಸ್ಯೆಗಳು ಕಾಡುತ್ತಿದ್ದು, ಜ್ವರದಿಂದ ಬಳಲುತ್ತಿರುವ ಅವರನ್ನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಠದ ಆಪ್ತರು ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ಸಾಮಾನ್ಯ ಚೆಕಪ್ ಗಾಗಿ ಶ್ರೀಗಳು ಆಸ್ಪತ್ರೆಗೆ ಆಗಮಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರುವ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಯ ವೈದ್ಯರಾದ ಡಾ.ರವೀಂದ್ರ ಮಠಕ್ಕೆ ಆಗಮಿಸಿ ಶ್ರೀಗಳ ಆರೋಗ್ಯ ತಪಾಸಣೆ ಮಾಡಿದರು. ಜನರಲ್ ಚೆಕಪ್ ಗಾಗಿ ಬಿಜಿಎಸ್ ಆಸ್ಪತ್ರೆಗೆ ದಿನದ ಮಟ್ಟಿಗೆ ಶ್ರೀಗಳನ್ನು ದಾಖಲು ಮಾಡುವ ಕುರಿತು ದಿನನಿತ್ಯ ಶ್ರೀಗಳ ಆರೋಗ್ಯ ನೋಡಿಕೊಳ್ಳುತ್ತಿರುವ ಡಾ.ಪರಮೇಶ್ ಹಾಗೂ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಗಳೊಂದಿಗೆ ಡಾ.ರವೀಂದ್ರ ಚರ್ಚೆ ನಡೆಸಿದ ನಂತರ ಬಿಜಿಎಸ್ ಆಸ್ಪತ್ರೆಗೆ ಶ್ರೀಗಳನ್ನು ಕರೆದುಕೊಂಡು ಹೋಗಲಾಯಿತು.
ಚಳಿಗಾಲ ಆಗಿರುವುದರಿಂದ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಭಕ್ತರು ಆತಂಕಪಡಬೇಡಿ ಎಂದು ಡಾ.ಪರಮೇಶ್ ಸ್ಪಷ್ಟಪಡಿಸಿದರು. ಸ್ವಾಮೀಜಿಯವರು ಮಠದಿಂದ ಚಿಕಿತ್ಸೆಗೆ ಹೊರಡುವ ಮುನ್ನ ಮಠಕ್ಕೆ ಆಗಮಿಸಿದ್ದ ಭಕ್ತರಿಗೆ ದರ್ಶನ ನೀಡಿದರು.
SCROLL FOR NEXT