ಬೆಂಗಳೂರು: ಶಾಲಾ ಮಕ್ಕಳ ಬ್ಯಾಗಿನ ಹೊರೆ ಇಳಿಸುವ ವಿಚಾರದಲ್ಲಿ ಹಾಗೂ ಮಕ್ಕಳಿಗೆ ಹೋಂವರ್ಕ್ ಕೊಡುವ ವಿಚಾರದಲ್ಲಿ ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.ಇದಕ್ಕೆ ಸಂಬಂಧಪಟ್ಟಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಮಾರ್ಗದರ್ಶಿ ಸೂತ್ರ ಪಾಲಿಸುವಂತೆ ನಿರ್ದೇಶನ ನೀಡಿದೆ.
ಇಲಾಖೆಯ ಮೂಲಗಳ ಪ್ರಕಾರ, ಶಾಲಾ ಬ್ಯಾಗ್ ಹೊರೆ ಇಳಿಕೆ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ,ವಿವಿಧ ಹಂತಗಳಲ್ಲಿ ಚರ್ಚೆ ಮಾಡಿ ಪಠ್ಯ ಪುಸ್ತಕಗಳ ಹೊರೆ ಇಳಿಸಲು ಪ್ರಯತ್ನಿಸುತ್ತಿದೆ. ಪಠ್ಯ ಪುಸ್ತಕಗಳಲ್ಲಿನ ವಿಷಯಗಳನ್ನು ಕಡಿಮೆ ಮಾಡಿ ಅದರ ಗಾತ್ರ ಮತ್ತು ಭಾರ ಕಡಿಮೆ ಮಾಡಲು ನಿರ್ಧರಿಸಿದೆ . ಹೀಗಾಗಲೇ ತಜ್ಞರ ಸಮಿತಿ ವರದಿ ನೀಡಿದ್ದು, ಹೇಗೆ ಬ್ಯಾಗ್ ಹೊರೆ ಇಳಿಸುವುದು ಎಂಬ ಬಗ್ಗೆ ಯೋಜಿಸಲಾಗುತ್ತಿದೆ.
ಈ ಎಲ್ಲಾ ಶಿಫಾರಸ್ಸುಗಳು ಕೇಂದ್ರ ಸರ್ಕಾರದ ಮಾರ್ಗದರ್ಶನ ನೀಡಿದ ನಂತರ ಬ್ಯಾಗ್ ಹೊರೆ ಇಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಷಯವನ್ನು ಕಡಿಮೆಗೊಳಿಸುವ ನಿರ್ಧಾರ ತೆಗೆದುಕೊಂಡರೆ, ಶಾಲಾ ಪಠ್ಯಪುಸ್ತಕಗಳಿಗೆ ಮುಂದಿನ ಪರಿಷ್ಕರಣೆ ಸಮಯದಲ್ಲಿ ಮಾತ್ರ ಸಾಧ್ಯ ಎಂದು ಅಧಿಕಾರಿಗಳು ಹೇಳಿದರು. ಮೂರು ವರ್ಷಗಳ ನಂತರ, ಆದರೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧಾರದಂತೆ, ಇಲಾಖೆ ತಜ್ಞರ ಸಮಿತಿ ರಚಿಸಿ ಶಾಲಾ ಮಕ್ಕಳ ಪಠ್ಯ ಪುಸ್ತಕದ ಹೊರೆ ಹೇಗೆ ಇಳಿಸಬೇಕು ಎಂಬ ಬಗ್ಗೆ ಶಾಲೆಗಳಿಗೆ ಭೇಟಿ ಎಷ್ಟು ಪ್ರಮಾಣದಲ್ಲಿ ನಿಗಧಿತ ಪುಸ್ತಕಗಳ ಬಳಕೆಯಾಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.