ಬೆಂಗಳೂರು: ಉತ್ತರ ಕರ್ನಾಟಕ ಜನರ ಬಹುಸಮಯದ ಕನಸು ಈಡೇರುವ ಸಮಯ ಬಂದಿದೆ. ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಬೆಳಗಾವಿಯಲ್ಲಿ ಡಿಸೆಂಬರ್ 17 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ಬೆಳಗಾವಿಯಲ್ಲಿ ಡಿಸೆಂಬರ್ 17ರಿಂದ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಕಾರ್ಯಾರಂಭ ಮಾಡಲು ನ್ಯಾಯಮೂರ್ತಿ ಭಕ್ತ ವತ್ಸಲ ನಿರ್ಧರಿಸಿದ್ದಾರೆ. ಮತ್ತು ಡಿಸೆಂಬರ್ 21 ರಿಂದ ಕಲಬುರಗಿಯಲ್ಲಿ ಆರಂಭವಾಗಲಿದೆ.
ಪ್ರಸ್ತುತ ರಾಜ್ಯ ಸರ್ಕಾರದ ನೌಕರರು ಮತ್ತು ಅಧಿಕಾರಿಗಳ ನೇಮಕಾತಿ, ವರ್ಗಾವಣೆ, ನಿವೃತ್ತಿ ಸೌಲಭ್ಯ, ಬಡ್ತಿ ಇತ್ಯಾದಿಗಳೆಲ್ಲವೂ ಬೆಂಗಳೂರಿನ ಕೆಎಸ್ಎಟಿಯಲ್ಲಿ ನಡೆಯುತ್ತದೆ. ಇನ್ನು ಮುಂದೆ ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಆರಂಭವಾಗಲಿರುವುದರಿಂದ ಸರ್ಕಾರದ ಕೆಲಸಗಳು ಹೆಚ್ಚು ಸಲೀಸಾಗಿ ಮತ್ತು ಶೀಘ್ರವಾಗಿ ನಡೆಯಲಿದೆ.
ಹೊಸ ವಕೀಲರು ಮತ್ತು ನ್ಯಾಯಾಧೀಶರ ನೇಮಕಕ್ಕೆ ಕಾಯದೆ ಈಗಿರುವ ಸಿಬ್ಬಂದಿಯನ್ನಿಟ್ಟುಕೊಂಡೇ ಕೆಲಸ ಆರಂಭಿಸುವುದಾಗಿ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಕೆ ಭಕ್ತವತ್ಸಲ ತಿಳಿಸಿದ್ದಾರೆ.