ರಾಜ್ಯ

ರಾಜ್ಯ ಸರ್ಕಾರಿ ನೌಕರರ ಭತ್ಯೆಗಳ ಹೆಚ್ಚಳ

Shilpa D
ಬೆಂಗಳೂರು: ಆರನೇ ವೇತನ ಆಯೋಗವು ಭತ್ಯೆಗಳ ಪರಿಷ್ಕರಣೆ ಸಂಬಂಧ ನೀಡಿದ್ದ ಕೆಲವು ಶಿಫಾರಸುಗಳಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 
ಸ್ವಂತ ವಾಹನ ಇಲ್ಲದವರಿಗೆ ಚಾಲಕರ ಭತ್ಯೆ 500 ರಿಂದ 750 ರೂ., ಸಹಾಯಕನ ಭತ್ಯೆ 750 ರೂ.ನಿಂದ 1000 ರೂ.ವರೆಗೆ ಹೆಚ್ಚಳ, ಪಿಂಚಣಿ ಸೌಲಭ್ಯ 20 ವರ್ಷ ಸೇವಾವಧಿಗೆ ಇದ್ದದ್ದು 15 ವರ್ಷಕ್ಕೆ ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿದೆ.
ಆರನೇ ವೇತನ ಆಯೋಗದ ಶಿಫಾರಸು ಪ್ರಕಾರ ಮೂಲ ವೇತನ ಪರಿಷ್ಕರಣೆ ತೀರ್ಮಾನ ಜಾರಿಯಿಂದ ಸರ್ಕಾರಕ್ಕೆ ವಾರ್ಷಿಕ 10,500 ಕೋಟಿ ರೂ. ಹೊರೆಯಾಗುತ್ತಿದ್ದು, ಇದೀಗ ಭತ್ಯೆಗಳ ಪರಿಷ್ಕರಣೆ ಯಿಂದ ಇನ್ನೂ 450 ಕೋಟಿ ರೂ. ಹೆಚ್ಚುವರಿ ಹೊರೆಯಾಗುವ ಅಂದಾಜು ಮಾಡಲಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ವರ್ಷದಲ್ಲಿ ಎಷ್ಟು ರಜೆ ಇರಬೇಕು ಎಂಬ ಬಗ್ಗೆ ತೀರ್ಮಾನಿಸಲು ಈಗಾಗಲೇ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಅದೇ ಸಮಿತಿ ವಾರದಲ್ಲಿ ಐದು ದಿನ ಕೆಲಸ ನಿರ್ವಹಣೆ ಅಥವಾ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡುವ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದ್ದು ಶೀಘ್ರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
SCROLL FOR NEXT