ರಾಜ್ಯ

ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಸರ್ಕಾರ: ಐಎಎಸ್ ಅಧಿಕಾರಿ ರಂದೀಪ್ ವರ್ಗಾವಣೆಗೆ ತಡೆ!

Shilpa D
ಬೆಂಗಳೂರು:  ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಸರ್ಕಾರ ಐಎಎಸ್ ಅಧಿಕಾರಿ ಡಿ.ರಂದೀಪ್ ಅವರನ್ನು ಮತ್ತೆ ಬಿಬಿಎಂಪಿ ಹೆಚ್ಚುವರಿ ಆಯುಕ್ತರನ್ನಾಗಿ ಮಾಡಿ ಆದೇಶ ಹೊರಡಿಸಿದೆ. 
ಪಾಲಿಕೆಯಲ್ಲಿ ಘನತ್ಯಾಜ್ಯ ವಿಭಾಗದಲ್ಲಿ ವಿಶೇಷ ಆಯುಕ್ತರಾಗಿದ್ದ ರಂದೀಪ್ ವರನ್ನು ವರ್ಗಾವಣೆಗೆ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಹಿ ಸಂಗ್ರಹಕ್ಕೆ ಮುಂದಾಗಿದ್ದರು.
ಡಿಸೆಂಬರ್ 1 ರಂದು ಸರ್ಕಾರ ಬಿಬಿಎಂಪಿ ಯಿಂದ ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ವರ್ಗಾವಣೆ ಮಾಡಿತ್ತು. ನಗರದಲ್ಲಿ ಹಲವು ದಿನಗಳಿಂದ ತಾಜ್ಯ ವಿಲೇವಾರಿ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರ ಮಾಡಲು ಕಠಿಣ ಕ್ರಮಗಳನ್ನು ಅವರು ಕೈಗೊಂಡಿದ್ದರು. 
‘ವಿ ವಾಂಟ್ ಆಡಿಷನಲ್ ಕಮೀಷನರ್ ರಂದೀಪ್ ಬ್ಯಾಕ್’ ಎಂಬ ಹೆಸರಿನಲ್ಲಿ ಮೀನಾಕ್ಷಿ ಪ್ರಭು ಎಂಬುವವರು ಆನ್ ಲೈನ್ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ, ಸುಮಾರು 1500ಕ್ಕೂ ಅಧಿಕ ಜನರು ಸಹಿ ಸಂಗ್ರಹ ಮಾಡಿದ್ದರು.
ತಾವು ಸೂಚನೆ ನೀಡಿದ ಸಂಸ್ಥೆಗೆ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನೀಡಬೇಕು ಎಂಬ ವಿಚಾರದಲ್ಲಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ರಂದೀಪ್ ನಡುವೆ ಈಮೇಲ್ ನಲ್ಲಿ ವಾದ ವಿವಾದ ನಡೆದಿತ್ತು ಈ ಹಿನ್ನೆಲೆಯಲ್ಲಿ ರಂದೀಪ್ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. 
ಹೀಗಿದ್ದರೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಸರ್ಕಾರ, ವರ್ಗಾವಣೆಯನ್ನು ತಡೆ ಹಿಡಿದಿದೆ.
SCROLL FOR NEXT