ರಾಜ್ಯ

ಮಂಡ್ಯ ಬಸ್ ದುರಂತ: 30 ಜನರ ಸಾವಿಗೆ ಕಾರಣನಾದ ಚಾಲಕನಿಗೆ ನ್ಯಾಯಾಂಗ ಬಂಧನ

Raghavendra Adiga
ಮಂಡ್ಯ: ನವೆಂಬರ್ 24ರಂದು ಮಂಡ್ಯದ ಪಾಂಡವಪುರ ಕನಗನಮರಡಿ ನಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ 30 ಜನರ ಸಾವಿಗೆ ಕಾರಣವಾಗಿದ್ದ ಬಸ್ ಚಾಲಕನನ್ನು ಬಂಧಿಸಲಾಗಿದೆ.
ಬಸ್​ ಚಾಲಕ ಹೊಳಲು ಶಿವಣ್ಣ ಎಂಬಾತನನ್ನು ಪೋಲೀಸರು ಭಾನುವಾರ ವಶಕ್ಕೆ ಪಡೆದಿದ್ದು ಇಂದು (ಸೋಮವಾರ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
 ಕನಗನಮರಡಿ ಬಳಿ ವಿ.ಸಿ. ನಾಲೆಗೆ ಖಾಸಗಿ ಬಸ್ ಬಿದ್ದು 30 ಮಂದಿ ಸಾವಿಗೀಡಾಗಿದ್ದರು.ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದು ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಚಾಲಕ ಶಿವಣ್ಣ ನನ್ನು ನಿನ್ನೆ ಪಾಂಡವಪುರ ಸಮೀಪ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ನ್ಯಾಯಾಲಯಕ್ಕೆ ಹಾಜರಾದ ಚಾಲಕ "ಕನಗನಮರಡಿ ಸಮೀಪಿಸಿದಾಗ ಬಸ್ ನನ್ನ ನಿಯಂತ್ರಣದಿಂದ ತಪ್ಪಿತು.ಸ್ ನಾಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿತ್ತು, ಆದರೆ ನಾನದನ್ನು ತಪ್ಪಿಸಲು ಮುಂದಾಗಿದ್ದೆ.ಆದರೆ ದುರದೃಷ್ಟಾವಶಾತ್  ಬಸ್ ನಾಲೆಗೆ ಉರುಳಿ ಬಿತ್ತು" ಎಂದಿದ್ದಾನೆ.
ಅಲ್ಲದೆ "ನನಗೂ ಈಜು ಬರುವುದಿಲ್ಲ, ಸ್ಥಳೀಯರಾದ ಅಂಕೇಗೌಡ ಎನ್ನುವವರು ನನಗೆ ಸಹಾಯ ಮಾಡಿದ್ದರು.ನನಗೆ ಸುಸ್ತಾಗಿ ಜಮ್ಮೀನೊಂದರ ಬಳಿ ಕುಳಿತಿದ್ದು  ಬಳಿಕ ಬಸರಾಳು  ಗ್ರಾಮಕ್ಕೆ ನಡೆದೇ ಹೋಗಿ ಅಲ್ಲಿಂದ ಬೆಂಗಳೂರಿಗೆ ತೆರಳಿ ತಲೆಮರೆಸಿಕೊಂಡಿದ್ದೆ." ಎಂದು ವಿವರಿಸಿದ್ದಾನೆ.
ನಾಲೆಗೆ ತಡೆಗೋಡೆ
ದುರಂತ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಭಾನುವಾರದಿಂದ ನಾಲೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಪ್ರಾರಂಭಿಸಿದೆ.
SCROLL FOR NEXT