ಕೈಗಾ ಅಣು ವಿದ್ಯುತ್ ಸ್ಥಾವರ 
ರಾಜ್ಯ

ಕೈಗಾ- 1 ಅಣು ವಿದ್ಯುತ್ ಘಟಕದಿಂದ ವಿಶ್ವ ದಾಖಲೆ, ಸಿಬ್ಬಂದಿಗೆ ಪ್ರಧಾನಿ ಮೋದಿ ಅಭಿನಂದನೆ

ಕೈಗಾ-1 ಅಣು ವಿದ್ಯುತ್ ಘಟಕ ನಿರಂತರವಾಗಿ 941 ದಿನಗಳಿಗಿಂತಲೂ ಹೆಚ್ಚಿನ ದಿನ ಅಣು ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದೆ.

ಬೆಂಗಳೂರು: ಕೈಗಾ-1 ಅಣು ವಿದ್ಯುತ್ ಘಟಕ ನಿರಂತರವಾಗಿ 941 ದಿನಗಳಿಗಿಂತಲೂ ಹೆಚ್ಚಿನ ದಿನ  ಅಣು ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದೆ.
ಕಾರವಾರದಿಂದ 56 ಕಿಮೀ ದೂರದಲ್ಲಿರುವ ಕೈಗಾ- 1 ಅಣು ವಿದ್ಯುತ್ ಘಟಕ ಸತತವಾಗಿ 941 ದಿನ ಕಾರ್ಯನಿರ್ವಹಿಸುವ ಮೂಲಕ ವಿಶ್ವಮಟ್ಟದಲ್ಲಿ ಸಾಧನೆ ಮಾಡಿದೆ. ಇದಕ್ಕೂ ಮುಂದೆ ಇಂಗ್ಲೆಂಡಿನ ಹೈಸಾಮ್ ಘಟಕ ನಿರಂತರವಾಗಿ 940 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ದಾಖಲೆ  ಸೃಷ್ಟಿಸಿತ್ತು.
ಕೈಗಾ ಅಣು ವಿದ್ಯುತ್ ಸ್ಥಾವರದ ಈ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಕೈಗಾ ಅಣು  ವಿದ್ಯುತ್ ಸ್ಥಾವರದ ವಿಜ್ಞಾನಿಗಳು, ಹಾಗೂ ತಂತ್ರಜ್ಞರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಭಾರತದ ತಂತ್ರಜ್ಞರು ಹಾಗೂ ವಿಜ್ಞಾನಿಗಳಿಂದ ಮತ್ತೊಂದು ವಿಶ್ವ  ದಾಖಲೆ ನಿರ್ಮಾಣವಾಗಿದೆ. ದೇಶಿ  ವಿನ್ಯಾಸದ ಕೈಗಾ-1 ಅಣು ವಿದ್ಯುತ್ ಘಟಕ ನಿರಂತರವಾಗಿ 940  ದಿನಗಳು ಕಾರ್ಯನಿರ್ವಹಿಸಿದೆ. ಇದು ದೊಡ್ಡ ಸಾಧನೆಯಾಗಿದ್ದು, ಎಲ್ಲಾ ಸಿಬ್ಬಂದಿಯನ್ನೂ ಅಭಿನಂದಿಸುವುದಾಗಿ ನರೇಂದ್ರ ಮೋದಿ ಟ್ವೀಟರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಕೈಗಾ-1 ಅಣು ವಿದ್ಯುತ್ ಘಟಕ 941 ದಿನವೂ ಸತತವಾಗಿ ವಿದ್ಯುತ್ ಉತ್ಪಾದಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದೆ. ಈ ಘಟಕ   5 ಬಿಲಿಯನ್  ಯೂನಿಟ್ ವಿದ್ಯುತ್ ನ್ನು ಉತ್ಪಾದಿಸುತ್ತಿದೆ  ಎಂದು ಭಾರತೀಯ ಅಣು ವಿದ್ಯುತ್ ನಿಗಮ ನಿಯಮಿತ- ಎನ್ ಪಿಸಿಐಎಲ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT