ರಾಜ್ಯ

ದಿ.ಅಂಬರೀಶ್ ಗೆ ಅವಮಾನ: ಮೂರು ದಿನ ಆದರೂ ಲೋಕಸಭೆಯಲ್ಲಿ ಸಂತಾಪ ಗೌರವವಿಲ್ಲ!

Shilpa D
ನವದೆಹಲಿ: ಮಾಜಿ ಕೇಂದ್ರ ಸಚಿವ, ಸ್ಯಾಂಡಲ್‍ವುಡ್ ನಟ ದಿ.ಅಂಬರೀಶ್ ಅವರಿಗೆ ಲೋಕಸಭೆಯಲ್ಲಿ ಮತ್ತೆ ಅವಮಾನವಾಗಿದೆ. ಕಲಾಪ ಆರಂಭದ ಮೊದಲ ದಿನ ನಿಧನ ಹೊಂದಿದ್ದ ಗಣ್ಯರಿಗೆ ಸಂತಾಪ ಸೂಚಿಸುವ ಸಂಪ್ರದಾಯವಿದೆ.
ಕಲಾಪದಲ್ಲಿ ಅಂಬರೀಷ್ ಅವರಿಗೆ ಸಂತಾಪ ಸೂಚಿಸದಿರುವುದು, ರಾಜ್ಯ ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ.
ಹಾಗಾಗಿ ಮಂಗಳವಾರದಿಂದ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದಲ್ಲಿ ಕಲಾಪ ಆರಂಭಗೊಂಡಾಗ ಮಾಜಿ ಸಚಿವ ಅನಂತ್ ಕುಮಾರ್ ಅವರಿಗೆ ಸಂತಾಪ ಸೂಚಿಸಲಾಗಿತ್ತು. ಇದೇ ವೇಳೆಸಂತಾಪದ ಬಳಿಕ ಕಲಾಪ ಆರಂಭಗೊಂಡಾಗ ಮಾಜಿ ಪ್ರಧಾನಿ ದೇವೇಗೌಡ ಅವರು  ಸಂತಾಪ ಸೂಚಕ ಪಟ್ಟಿಯಲ್ಲಿ ಜಾಫರ್ ಶರೀಫ್ ಮತ್ತು ಅಂಬರೀಶ್ ಹೆಸರು ಕೈ ಬಿಟ್ಟ ವಿಚಾರವನ್ನು ಪ್ರಸ್ತಾಪ ಮಾಡಿದರು. 
ಈ ವಿಚಾರ ಗಮನಕ್ಕೆ ಬಂದ ಕೂಡಲೇ ಸ್ಪೀಕರ್ ಸುಮಿತ್ರಾ ಮಹಾಜನ್ ಬುಧವಾರ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದರು. ಆದರೆ ಇಂದು ಬೆಳಗ್ಗೆ ಮಾಜಿ ಕೇಂದ್ರ ರೈಲ್ವೇ ಸಚಿವ ಜಾಫರ್ ಶರೀಫ್ ಅವರಿಗೆ ಸಂತಾಪ ಸೂಚಿಸಿ ಅಂಬರೀಶ್ ಹೆಸರು ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಂಬರೀಶ್ ಅವರಿಗೆ ಸಂತಾಪ ಸೂಚಿಸುವಂತೆ ಮನವಿ ಮಾಡಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಗುರುವಾರ ಸಂತಾಪ ಸೂಚಿಸಲಾಗುವುದು ಎಂದು ತಿಳಿಸಿ ಮುಂದೂಡಿದ್ದಾರೆ.
SCROLL FOR NEXT