ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ನಾಡದೇವತೆಗೇ ಸಂಕಷ್ಟ! ಚಾಮುಂಡಿ ಪೂಜೆ ನಿಲ್ಲಿಸಿ ದೇವಸ್ಥಾನ ಅರ್ಚಕರ ಪ್ರತಿಭಟನೆ

ನಾಡದೇವತೆ ಚಾಮುಂಡಿ ದೇವಸ್ಥಾನದ ಅರ್ಚಕರು, ಸಿಬ್ಬಂದಿ ವರ್ಗ ಅನೇಕ ಬೇಡಿಕೆಗಳನ್ನು ಮುಂದಿಟ್ಟು ಚಾಮುಂಡಿ ಬೆಟ್ಟದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ನಾಡದೇವತೆಗೇ ಸಂಕಷ್ಟ! ಚಾಮುಂಡಿ ಪೂಜೆ ನಿಲ್ಲಿಸಿ ದೇವಸ್ಥಾನ ಅರ್ಚಕರ ಪ್ರತಿಭಟನೆ
Raghavendra Adiga
Updated On : 14 Dec 2018, 3:57 am
ಮೈಸೂರು: ನಾಡದೇವತೆ ಚಾಮುಂಡಿ ದೇವಸ್ಥಾನದ ಅರ್ಚಕರು, ಸಿಬ್ಬಂದಿ ವರ್ಗ ಅನೇಕ ಬೇಡಿಕೆಗಳನ್ನು ಮುಂದಿಟ್ಟು  ಚಾಮುಂಡಿ ಬೆಟ್ಟದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಶುಕ್ರವಾರದಂದೇ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪ್ರತಿಭಟನೆಗಿಳಿದ ಅರ್ಚಕ ಹಾಗೂ ಸಿಬ್ಬಂದಿ ವೃಂದದ ಕಾರಣ ನಾಡದೇವಿಗೇ ಪೂಜೆ ಇಲ್ಲದಂತಾಗಿದೆ.ವೇತನ ತಾರತಮ್ಯ ಸೇರಿ ಏಳು ಪ್ರಮುಖ ಬೇಡಿಕೆ ಇಟ್ಟು ಅರ್ಚಕರು, ದೇವಸ್ಥಾನ ಸಿಬ್ಬಂದಿಗಳು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ತೊಡಗಿದ್ದಾರೆ.
ಬೆಳಿಗ್ಗೆ  7.30ರೊಳಗೆ ಪೂಜೆ ಮುಗಿಸಿ ಚಾಮುಂಡಿ ದೇಗುಲದ ಅರ್ಚಕರು ಧರಣಿ ಕುಳಿತಿದ್ದಾರೆ.ಟಿಕೆಟ್ ಕೌಂಟರ್, ಪ್ರಸಾದ ಕೌಂಟರ್, ಸ್ವಚ್ಛತಾ ಸಿಬ್ಬಂದಿ, ಬುಕ್ಕಿಂಗ್ ಕೌಂಟರ್, ಭದ್ರತಾ ಸಿಬ್ಬಂದಿಗಳೂ ಸೇರಿ 220 ಮಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Advertisement

Advertisement

ಅರ್ಚಕರ ಈ ನಿರ್ಧಾರದಿಂದ ಭಕ್ತಾದಿಗಳು, ಪ್ರವಾಸಿಗರು ಕುಪಿತರಾಗಿದ್ದಾರೆ. ಶುಕ್ರವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿರುವ ಭಕ್ತರಿಗೆ ಇಲ್ಲಿ ದೇವಿಯ ದರ್ಶನ ಮಾತ್ರ ಲಭ್ಯವಿದ್ದು ಕುಂಕುಮಾರ್ಚನೆ ಸೇರಿ ಯಾವ ಸೇವೆಗಳೂ ಲಭ್ಯವಿಲ್ಲದಿರುವುದು ಬೇಸರ ತಂದಿದೆ.
ಆಷಾಢ ಮಾಸದ ಸಮಯದಲ್ಲೇ ನಾವು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಕೇಳಿದ್ದೆವು, ಒಂದೊಮ್ಮೆ ಸರ್ಕಾರ ಭರವಸೆ ಈಡೇರಿಸದಿದ್ದರೆ ಧರಣಿ ನಡೆಸುವುದಾಗಿ ಹೇಳಿದ್ದೆವು. ಆಗ ಅಧಿಕಾರಿಗಳು ತಮ್ಮ ಭರವಸೆ ಈಡೇರಿಸುವ ಮಾತು ನೀಡಿದ್ದರು. ಆದರ್ದೆ ಇದಾಗಲೇ ಎರಡೂವರೆ ತಿಂಗಳಾದರೂ ಯಾವ ಭರವಸೆಯೂ ಈಡೇರಿಲ್ಲ. ಹೀಗಾಗಿ ಇಂದಿನಿಂದ ನಾವು ಅನಿರ್ದಿಷ್ಟ ಕಾಲ  ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಭಟನಾಕಾರರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement