ಪರೀಕ್ಷೆ ಬರೆಯುತ್ತಿರುವ 76 ವರ್ಷದ ಅಜ್ಜ 
ರಾಜ್ಯ

ಬಾಗಲಕೋಟೆ: 4ನೇ ಸ್ನಾತಕೋತ್ತರ ಪದವಿಗಾಗಿ ಎಂಎ ಪರೀಕ್ಷೆ ಬರೆಯುತ್ತಿದ್ದಾರೆ 76 ವರ್ಷದ ಈ ಅಜ್ಜ!

ಕಲಿಯುವಿಕೆ ನಿರಂತರ. ಅದಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುತ್ತಾರೆ. ಅದನ್ನು 76 ವರ್ಷದ ಈ ಅಜ್ಜ ನಿಜ ಮಾಡಿ ತೋರಿಸುತ್ತಿದ್ದಾರೆ...

ವಿಜಯಾಪುರ/ಬಾಗಲಕೋಟೆ: ಕಲಿಯುವಿಕೆ ನಿರಂತರ. ಅದಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುತ್ತಾರೆ. ಅದನ್ನು 76 ವರ್ಷದ ಈ ಅಜ್ಜ ನಿಜ ಮಾಡಿ ತೋರಿಸುತ್ತಿದ್ದಾರೆ.
ಈಗಾಗಲೇ 3 ಪಿಜಿ ಮುಗಿಸಿದ್ದರೂ, 4ನೇ ಪಿಜಿಗಾಗಿ ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಬಿಎಡ್‌ ಕಾಲೇಜ್‌ನಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಂತೆ ಪರೀಕ್ಷೆ ಬರೆಯುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಬಾಗಲಕೋಟ ಜಿಲ್ಲೆ ಇಳಕಲ್‌ ತಾಲೂಕು ಕೆಲೂರ ಗ್ರಾಮದ ಆರೋಗ್ಯ ಇಲಾಖೆಯ ನಿವೃತ್ತ ಪತ್ರಾಂಕಿತ ಸಹಾಯಕ ನಿಂಗಯ್ಯ ಬಸಯ್ಯ ಒಡೆಯರ ಎಂಬ 76ರ ಇಳಿಯಂಚಿನ ವೃದ್ಧ ಪರೀಕ್ಷೆ ಬರೆಯುವ ಮೂಲಕ ಇಡೀ ಪರೀಕ್ಷಾ ಕೇಂದ್ರದ ಗಮನಸೆಳೆದಿದ್ದಾರೆ. . 
1942 ಅಕ್ಟೋಬರ್‌ 4ರಂದು ಜನಿಸಿದ ಈ ಅಜ್ಜನಿಗೀಗ ಬರೋಬ್ಬರಿ 76 ವಯಸ್ಸು. ನಿವೃತ್ತಿಯಾಗಿ 18 ವರ್ಷಗಳು ಸಂದಿವೆ. ಆದರೆ ಈ ವಯಸ್ಸಲ್ಲೂ ಜ್ಞಾನದ ವಿಸ್ತರಿಸಿಕೊಳ್ಳಬೇಕೆಂಬ ಇವರ ಹುಮ್ಮಸ್ಸು ಕುಗ್ಗಿಲ್ಲ. 1967ರಲ್ಲಿ ಬಿಎ ವಿದ್ಯಾರ್ಹತೆ ಮೇಲೆ ಆರೋಗ್ಯ ಇಲಾಖೆಯಲ್ಲಿ ಗುಮಾಸ್ತನಾಗಿ ಸರಕಾರಿ ಸೇವೆಗೆ ಸೇರಿಕೊಂಡಿದ್ದರು. ಸ್ನಾತಕೋತ್ತರ ಪದವಿ ಮಾಡಿಕೊಳ್ಳಬೇಕೆಂಬ ಅದಮ್ಯ ಆಸೆ ಚಿಗುರೊಡೆದಿದ್ದೇ ತಡ. 1996ರಲ್ಲಿ ಮೊಟ್ಟ ಮೊದಲ ಬಾರಿಗೆ ಧಾರವಾಡ ಕವಿವಿಯ ಬಾಹ್ಯ ವಿದ್ಯಾರ್ಥಿಯಾಗಿ ಕನ್ನಡ ಎಂಎ ಪಾಸು ಮಾಡಿಕೊಂಡರು. 2000ನೇ ಇಸ್ವಿಯಲ್ಲಿ ನಿವೃತ್ತರಾದರು. 
ಆದರೆ ಇವರ ಉತ್ಸಾಹ ಮಾತ್ರ ಬತ್ತಲಿಲ್ಲ. 2011ರಲ್ಲಿ ಮತ್ತೆ ಇಂಗ್ಲಿಷ್‌ನಲ್ಲಿ ಹಾಗೂ 2016ರಲ್ಲಿ ಹಿಂದಿ ಎಂಎ ಮಾಡಿಕೊಂಡರು. ಈಗ ಎಪ್ಪತ್ತಾರಾಗಿದ್ದರೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂಬ ಅದಮ್ಯ ಉತ್ಸಾಹದಿಂದ ಇಗ್ನೋ ವಿಜಯಪುರ ಅಧ್ಯಯನ ಕೇಂದ್ರದ ಬಾಹ್ಯ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುವ ಮೂಲಕ ಪ್ರಾಧ್ಯಾಪಕರನ್ನೇ ಬೆರುಗೊಳಿಸಿದ್ದಾರೆ. ಅಜ್ಜನ ವಿಶೇಷತೆ ಇಲ್ಲಿಗೆ ನಿಲ್ಲಲ್ಲ. ಬರವಣಿಗೆಗೆ ಎರಡೂ ಕೈಗಳು ಸಾಥ್‌ ನೀಡಿವೆ. ಒಂದು ಕೈ ಬೇನೆಯಾದರೆ, ಮತ್ತೊಂದು ಕೈಯಿಂದ ಪರೀಕ್ಷೆ ಬರೆಯುವ ಮೂಲಕ ಉತ್ತಮ ಸ್ಕೋರ್ ಮಾಡುವುದರಲ್ಲೂ ಈ ಅಜ್ಜ ನಿಷ್ಣಾತ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ